HEALTH TIPS

ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘದ 58ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ


ಕಾಸರಗೋಡು
: ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘದ 58ನೇ ರಾಷ್ಟ್ರೀಯ ಸಮ್ಮೇಳನ ಎಂ. ಕೃಷ್ಣನ್ ನಂಬೀಶನ್ ನಗರ(ಕಾಸರಗೋಡು ವಿದ್ಯಾನಗರ ಚೆಟ್ಟುಂಗುಳಿ ರಾಯಲ್ ಕನ್ವೆನ್ಷನ್ ಸೆಂಟರ್)ನಲ್ಲಿ ಶನಿವಾರ ಆರಂಭಗೊಂಡಿತು.  ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಎಲ್.ಪಿ.ವಿಶ್ವನಾಥನ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ದೇವಸ್ಥಾನದ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಅವರು ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ,  ಬ್ರಾಹ್ಮಣ ಸಮುದಾಯದ ವಿರುದ್ಧ ತೋರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಪ್ರಬಲವಾಗಿ ಪ್ರತಿಭಟಿಸುವುದು ಅನಿವಾರ್ಐ ಎಂದು ತಿಳಿಸಿದರು. 

ಕಾರ್ಯಕ್ರಮದ ವೇಳೆ ವಿಶೇಷ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ನಡೆಯಿತು. ಸಭೆಯಲ್ಲಿ 'ಪುಷ್ಪಕಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದುಮ ಶಾಸಕ ಕೆ. ನೀಲಕಂಠನ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಉಪಸ್ಥೀತರಿದ್ದರು.  ಸಂಘಟನಾ ಸಮಿತಿಯ ಅಧ್ಯಕ್ಷ ವಿ.ಎಂ. ಕೃಷ್ಣಪ್ರಸಾದ್ ಸ್ವಾಗತಿಸಿದರು.   ಪ್ರಧಾನ ಸಂಚಾಲಕ ರಾಜೇಶ್ ಇ. ವಂದಿಸಿದರು. ಕೇರಳ ಹಾಗೂ ಇತರ ರಾಜ್ಯಗಳ  ಸುಮಾರು 1,500 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದು, ಸೆ. 13ರಂದು ಸಮಾರೋಪ ಸಮಾರಂಭ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries