HEALTH TIPS

ಬಾಯಾರು ಮುಳಿಗದ್ದೆ ನೂತನ ಗಣೇಶ ಮಂದಿರ ಲೋಕಾರ್ಪಣೆ, ಗಣೇಶೋತ್ಸವಕ್ಕೆ ಚಾಲನೆ

ಉಪ್ಪಳ: ಬಾಯಾರು ಮುಳಿಗದ್ದೆ ಗಣೇಶಗಿರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನೂತನ ಗಣೇಶ ಮಂದಿರ ಲೋಕಾರ್ಪಣೆ ಹಾಗೂ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶನಿವಾರ ಆರಂಭಗೊಂಡಿತು.  ಸೆ. 15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಖ್ರಮದ ಅಂಗವಾಗಿ ಶನಿವಾರ ಹಸಿರುವಾಣಿಸಮರ್ಪಣಾ ಮೆರವಣಿಗೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಗಣೇಶಗಿರಿ ವರೆಗೆ ನಡೆಯಿತು. ಸೆ. 13ರಂದು ಬೆಳಗ್ಗೆ 8.30ರ ವೇಳೆ ನೂತನ ಮಂದಿರದ ಪ್ರವೇಶೋತ್ಸವ, 10.30ಕ್ಕೆ ಗಣೇಶಮಂದಿರ ಲೋಕಾರ್ಪಣೆ, ಸಭೆ, ಅಪರಾಹ್ನ 2ರಿಂದ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, ಸಂಜೆ 6ಕ್ಕೆ ರಜತ ನೃತ್ಯಾಂತರ್ಯಾನ, ಭರತನಾಟ್ಯ, 14ರಂದು ಬೆಳಿಗ್ಗೆ 6.30ಕ್ಕೆ ಶ್ರೀ ವಿಘ್ನೇಶನ ಮೂರ್ತಿ ಪ್ರತಿಷ್ಠೆ, ಗಣಪತಿ ಹವನ, ಮಧ್ಯಾಹ್ನ 1ರಿಂದ ಯಕ್ಷಗಾನ ತಾಳಮದ್ದಳೆ, 6.30ರಿಂದ ಯಕ್ಷಗಾನ ಬಯಲಾಟ, 15ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ, ಅಪರಾಹ್ನ 3 ಗಂಟೆಗೆ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries