ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವಷದ ಚಾತುಮಾಸ್ಯ ವ್ರvತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಾಯೋಜಿತ 'ಯಕ್ಷಗಾನ ತಾಳಮದ್ದಳೆ ಅಹ್ವಾಹ' ಸಮಾರೋಪ ಸಮಾರಂಭ ಸೆ. 13 ರಂದು ಸಂಜೆ 5ಕ್ಕೆ ಶ್ರೀಮಠದ ಸಭಾಂಗಣದಲ್ಲಿ ಜರುಗಲಿದೆ.
ಕರ್ನಾಟಕದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಸಮಾರೋಪ ಭಾಷಣ ಮಾಡುವರು.
ಕರ್ನಾಟಕ ಬ್ಯಾಂಕ್ ಸಿಓಓ, ಮುಖ್ಯ ಮಹಾ ಪ್ರಬಂಧಕ ರಾಜಾ ಬಿ.ಎಸ್ ಮತ್ತು ಕಲಾಪೋಷಕ, ಖ್ಯಾತ ವೈದ್ಯ ಡಾ. ಹರಿಕೃಷ್ಣ ಪರ್ಣಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. 2026 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕøತರಾದ ಎಂ.ಕೆ. ರಮೇಶ ಆಚಾರ್ಯ, 2026 ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಮಯ್ಯ, 2026 ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಪದ್ಮನಾಭ ಉಪಾಧ್ಯಾಯ, 2026 ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮಾ ಯತೀಶ್ ರೈ ಅವರನ್ನು ಅಭಿನಂದಿಸಲಾಗುವುದು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ 'ಶ್ರೀಕೃಷ್ಣ ಸಂಧಾನ-ತಾಮ್ರಧ್ವಜ ಕಾಳಗ' ಯಕ್ಷಗಾನ ತಾಳಮದ್ದಳೆ ನಡೆಯುವುದು.



