HEALTH TIPS

ಅರಾಮ್ಕೊ ತೈಲ ಘಟಕ ಗುರಿಯಾಗಿಸಿ ಸೌದಿ ಮೇಲೆ ಹೂಥಿ ದಾಳಿ: 73 ಮಂದಿಗೆ ಗಾಯ

ರಿಯಾದ್‌/ ಕೈರೊ(AP/AFP): ಯೆಮನ್‌ನ ಹೂಥಿ ಬಂಡುಕೋರರು ಸೌದಿ ಅರೇಬಿಯಾದ ಹಲವು ಗುರಿಗಳ ಮೇಲೆ ಮಂಗಳವಾರ ಭಾರಿ ದಾಳಿ ನಡೆಸಿದ್ದು, 73 ಮಂದಿ ಗಾಯಗೊಂಡಿದ್ದಾರೆ.


‍ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಹೂಥಿ ಬಂಡುಕೋರರು ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.

ಇದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ಕೂಡಾ ಬಂಡುಕೋರರ ತಾಣಗಳನ್ನು ಗುರಿಯಾಗಿಸಿ ವಾಯು ದಾಳಿ ನಡೆಸಿದೆ.

'ಅಭಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಕಿಂಗ್‌ ಖಾಲಿದ್‌ ವಾಯು ನೆಲೆ ಮತ್ತು ಸರ್ಕಾರಿ ಸ್ವಾಮ್ಯದ ಅರಾಮ್ಕೊ ಕಂಪನಿಗೆ ಸೇರಿದ ಅಭಾ ಹಾಗೂ ಜಿಝಾನ್‌ನಲ್ಲಿರುವ ತೈಲ ಘಟಕಗಳ ಮೇಲೆ ದಾಳಿ ನಡೆಸಿದ್ದೇವೆ' ಎಂದು ಇರಾನ್‌ ಬೆಂಬಲಿತ ಹೂಥಿ ಬಂಡುಕೋರರು ತಿಳಿಸಿದ್ದಾರೆ.

ದಾಳಿಯಿಂದ ತೈಲ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. 'ಸೌದಿ ಅರೇಬಿಯಾ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಪಶ್ವಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಹೂಥಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ಹಲವು ಸಲ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರದಲ್ಲಿ ಸಾಗುವ ಹಲವು ಹಡಗುಗಳನ್ನೂ ಗುರಿಯಾಗಿಸಿದ್ದಾರೆ.

ಸೌದಿ ಪ್ರತಿದಾಳಿ: 'ತಾಯಿಜ್ ಪ್ರಾಂತ್ಯದ ಅಲ್‌-ವಝೀಯಾ ಜಿಲ್ಲೆಯ ಹಲವು ತಾಣಗಳನ್ನು ಗುರಿಯಾಗಿಸಿ ಸೌದಿ ಅರೇಬಿಯಾ ದಾಳಿ ನಡೆಸಿದೆ' ಎಂದು ಹೂಥಿ ಸಂಘಟನೆಯ ಅಲ್‌ಮಸೀರಾ ಸುದ್ದಿವಾಹಿನಿ ವರದಿ ಮಾಡಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries