HEALTH TIPS

Asian Games 2026 | ಸಾಂಡಾ ವಿಭಾಗದಲ್ಲಿ ಭಾರತದ ವುಶು ಪಟು ರೋಷಿಬಿನಾ ದೇವಿಗೆ ಬೆಳ್ಳಿ ಪದಕ

ನಗೋಯಾ: ಗುರುವಾರ ನಡೆದ ಏಷ್ಯನ್ ಗೇಮ್ಸ್ ನ ಮಹಿಳೆಯರ ಸಾಂಡಾ 60 ಕೆಜಿ ವಿಭಾಗದ ಫೈನಲ್ ನಲ್ಲಿ ಭಾರತದ ವುಶು ಪಟು ನವೊರೆಮ್ ರೋಷಿಬಿನಾ ದೇವಿ, ಚೀನಾದ ಝಾಂಗ್ ಶಿಯಾವೋಯು ವಿರುದ್ಧ 0-2 ಅಂತರದಿಂದ ಸೋತು ಸತತ ಎರಡನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 


ಚಿನ್ನದ ಪದಕದ ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಚೀನಾದ ಝಾಂಗ್, ಎರಡೂ ಸುತ್ತುಗಳನ್ನು 5-0 ಅಂತರದಿಂದ ಗೆದ್ದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು.

ಸತತ ಮೂರು ಪದಕ ಗೆದ್ದ ಮೊದಲ ಭಾರತೀಯ ವನಿತೆ

ಇದರೊಂದಿಗೆ ರೋಷಿಬಿನಾ ದೇವಿ ಏಷ್ಯನ್ ಗೇಮ್ಸ್ ನ ವುಶು ಕ್ರೀಡೆಯಲ್ಲಿ ಸತತ ಮೂರು ಬಾರಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರು 2018ರಲ್ಲಿ ಕಂಚು, 2022 ಮತ್ತು 2026ರಲ್ಲಿ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ನಲ್ಲೂ ಬೆಳ್ಳಿ ಗೆದ್ದಿದ್ದ ರೋಷಿಬಿನಾ, ಆಗಲೂ ಫೈನಲ್ ನಲ್ಲಿ ಚೀನಾದ ಕ್ಸಿಯಾವೊವಿ ವಿರುದ್ಧ ಸೋಲುಂಡಿದ್ದರು.

ಜಪಾನ್ ನಲ್ಲಿ ನಡೆದ ಈ ಬಾರಿಯ ಕ್ರೀಡಾಕೂಟದಲ್ಲಿ ರೋಷಿಬಿನಾ ಅವರ ಅಭಿಯಾನ ಗಮನಾರ್ಹವಾಗಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ವಿಯೆಟ್ನಾಂನ 2023ರ ವಿಶ್ವ ಚಾಂಪಿಯನ್ ನ್ಗುಯೆನ್ ಥಿ ಥು ಥುಯಿ ಅವರನ್ನು ಮಣಿಸಿದ್ದರು.

ರೋಷಿಬಿನಾ ಗೆದ್ದ ಬೆಳ್ಳಿ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 14ಕ್ಕೆ ಏರಿದ್ದು, ಇದರಲ್ಲಿ ಒಂದು ಚಿನ್ನ, ಆರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳು ಸೇರಿವೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries