ಕಾಸರಗೋಡು: ಬೇಕಲ ಪೋಲೀಸ್ ಠಾಣಾ ವ್ಯಾಪ್ತಿಯ ಮದ್ರಸಾದ 12 ವರ್ಷದ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿಕೊಂಡಿದ್ದ ಮದ್ರಸಾ ಉಸ್ತಾದ್ ಬೇಕಲ ಠಾಣೆಗೆ ಹಾಜರಾಗಿದ್ದು, ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮದ್ರಸಾ ಶಿಕ್ಷಕನ ಹಲ್ಲೆಗೆ ಅಂಜಿ 12ರ ಹರೆಯದ ಬಾಲಕಿ ಮಂಗಳೂರಿಗೆ ರೈಲಿನಲ್ಲಿ ತೆರಳಿದ್ದು, ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಈಕೆಯನ್ನು ಅಲ್ಲಿನ ಆಟೋ ಚಾಲಕರು ಪಾಂಡೇಶ್ವರ ಠಾಣೆಗೆ ತಲುಪಿಸಿದ್ದರು. ಮನೆಯವರಿಗೆ ಅಂಜಿ ಬಾಲಕಿ ತನ್ನನ್ನು ಯಾರೋ ಅಪಹರಿಸಿರುವುದಾಗಿ ಆರಂಭದಲ್ಲಿ ತಿಳಿಸಿದ್ದರೂ, ಮದ್ರಸಾ ಶಿಕ್ಷಕಗೆ ಅಂಜಿ ಸುಳ್ಳು ಹೇಳಿರುವುದು ಬಹಿರಂಗಗೊಂಡಿತ್ತು.
ಮದ್ರಸಾ ಶಿಕ್ಷಕರು ಕಲಿತುಕೊಂಡು ಬರಲು ಹೇಳಿದ್ದ ಪಾಠವನ್ನು ಬಾಲಕಿ ಕಲಿತಿರಲಿಲ್ಲ. ಈ ಕಾರಣದಿಂದ ಮದ್ರಸಾಕ್ಕೆ ತೆರಳದೆ ಕೋಟಿಕುಳಂನಿಂದ ರೈಲು ಹತ್ತಿ ಮಂಗಳೂರಿಗೆ ತೆರಳಿರುವುದಾಗಿ ಬಾಲಕಿ ಪೆÇಲೀಸರಿಗೆ ಹೇಳಿಕೆ ನೀಡಿದ್ದಳು.

