ಮಂಜೇಶ್ವರ: ಬೀಡಿಯೊಳಗೆ ಗಾಂಜಾ ಅಳವಡಿಸಿ ಸೇದುತ್ತಿದ್ದ ಮೂವರನ್ನು ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಉದ್ಯಾವರ ಕುಂಡುಕೊಳಕೆ ಅಬಿದಾ ಮಂಜಿಲ್‍ನ ಮುಹಮ್ಮದ್ ಅಬಿದ್ (34), ಮಂಜೇಶ್ವರ ಕೆ.ಜಿ.ಎಂ. ರಸ್ತೆ ಗುಡ್ಡೆಹೌಸ್ ನಿವಾಸಿ ಇಮ್ರಾನ್ ಹಸನ್ (46), ಮಂಜೇಶ್ವರ ಉದ್ಯಾವರ ಎರಡನೇ ರೈಲ್ವೆ ಗೇಟ್ ಬಳಿಯ ಅಬ್ದುಲ್ ರಹ್ಮಾನ್ (42) ಬಂಧಿತರು. ಸೋಮವರ ರಾಥ್ರಿ ಉದ್ಯಾವರ ಬಳಿಯ Pಕುಂಡುಕೊಳಕೆ ಬೀಚ್‍ನಲ್ಲಿ ಗಾಂಜಾ ಬೀಡಿ ಸೇದುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇವರನ್ನು ಬಳಿಕ ನೋಟೀಸು ನೀಡಿ ಬಿಡುಗಡೆ ಮಾಡಲಾಗಿದೆ.

