ಕಾಸರಗೋಡು: ಮೈಸೂರಿನಿಂದ ಬಸ್ಸಿನಲ್ಲಿ ಎಡನೀರಿಗೆ ವಾಪಸಾಗುತ್ತಿದ್ದ, ಮೈಸೂರು ನಿವಾಸಿಯಾಗಿರುವ ಯುವತಿ ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೈಸೂರು ಹಣಗೋಡು ಹೋಬಳಿ ಹರಿಣಹಳ್ಳಿ ನಿವಾಸಿ ಹಾಗೂ ಪಾಡಿ ಗ್ರಾಮದ ಎಡನೀರಿನ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿದ್ದ ದಿ. ಮಂಜುನಾಥ ಎಂಬವರ ಪುತ್ರಿ ನಿರ್ಮಲಾ(18) ನಾಪತ್ತೆಯಾದ ಯುವತಿ. ಈ ಬಗ್ಗೆ ನಿರ್ಮಲಾಳ ಅಜ್ಜ ಶರವಣ ಎಂಬವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಎಡನೀರಿನಿಂದ ಇತ್ತೀಚೆಗೆ ಮೈಸೂರಿಗೆ ತೆರಳಿದ್ದ ನಿರ್ಮಲಾ ಅಲ್ಲಿಂದ ಸೆ. 27ರಂದು ಮಧ್ಯಾಹ್ನ 2.30ಕ್ಕೆ ಬಸ್ಸನ್ನೇರಿದ್ದು, ಆದರೆ ಆಕೆ ಎಡನೀರಿಗೆ ತಲುಪದೆ ನಾಪತ್ತೆಯಾಗಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


