HEALTH TIPS

ಅಂತಾರಾಷ್ಟ್ರೀಯ ವಿಮಾನ ಸೇವೆ ರದ್ದುಗೊಳಿಸಿದ ಇರಾನ್ ಏರ್‌ಲೈನ್ಸ್‌

ಟೆಹರಾನ್: ಇರಾನ್‍ನ ಅರ್ಥವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ಹೊಸ ಪ್ರಯತ್ನದ ಭಾಗವಾಗಿ ಅಮೆರಿಕ ಇರಾನ್‍ನ ವಿಮಾನಯಾನ ಕ್ಷೇತ್ರದ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸಿದ ನಂತರ, ಇರಾನ್‍ನ ಏರ್‌ಲೈನ್ಸ್‌ಗಳು ಕೆಲವು ಅಂತರ್‍ರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಗೊಳಿಸಿವೆ ಎಂದು ವರದಿಯಾಗಿದೆ.  


ವಿಮಾನ ಸೇವೆಗಳನ್ನು ಅಮಾನತುಗೊಳಿಸಿರುವುದನ್ನು ಜಾರ್ಜಿಯಾ ಮತ್ತು ಅಜರ್‍ಬೈಜಾನ್‍ಗಳು ಅಧಿಕೃತವಾಗಿ ದೃಢಪಡಿಸಿವೆ. ಬಗ್ದಾದ್, ಮಸ್ಕತ್ ಮತ್ತು ಖತರ್‌ಗೆ ವಿಮಾನಗಳು ಸ್ಥಗಿತಗೊಂಡಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇರಾನ್‍ನಿಂದ ಹೊರಡುವ ಶೇಕಡಾ 80ಕ್ಕೂ ಹೆಚ್ಚು ಅಂತರ್‍ರಾಷ್ಟ್ರೀಯ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ವಿಶ್ವಸಂಸ್ಥೆಯ ಸಭೆಯಲ್ಲಿರುವ ಇರಾನ್‍ನ ಪ್ರತಿನಿಧಿಗಳು ಮನೆಗೆ ಹೇಗೆ ಹಿಂತಿರುಗುತ್ತಾರೆ ಎಂಬುದು ನನಗೆ ಖಚಿತವಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿರುವುದಾಗಿ `ಫಾಕ್ಸ್ ನ್ಯೂಸ್' ವರದಿ ಮಾಡಿದೆ.

ಇದೇ ವೇಳೆ, ನಿರ್ಬಂಧಗಳನ್ನು ಪಾಲಿಸದಂತೆ ಇರಾನ್ ನೆರೆಹೊರೆಯ ದೇಶಗಳಿಗೆ ಎಚ್ಚರಿಕೆ ನೀಡಿದ್ದು, ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ.

ಇರಾನ್‍ನ ವಿಮಾನಗಳ ಸೇವೆ ಅಮಾನತು: UAE

ಅಮೆರಿಕ ವಿಧಿಸಿರುವ ನಿರ್ಬಂಧಗಳಿಗೆ ಬದ್ಧವಾಗಿ ಇರಾನ್‍ನ ವಿಮಾನಯಾನ ಸಂಸ್ಥೆಗಳು ನಡೆಸುವ ಎಲ್ಲಾ ವಿಮಾನಗಳ ಸೇವೆಯನ್ನು ಅಮಾನತುಗೊಳಿಸಿರುವುದಾಗಿ ಯುಎಇ ಗುರುವಾರ ತಿಳಿಸಿದೆ.

ಇರಾನ್‍ನ ವಿಮಾನಯಾನ ಸಂಸ್ಥೆಗಳು ಯುಎಇಗೆ ನಡೆಸುವ ಎಲ್ಲಾ ವಿಮಾನ ಸೇವೆಗಳನ್ನು ಬುಧವಾರ ಮಧ್ಯರಾತ್ರಿಯಿಂದ ರದ್ದುಗೊಳಿಸಲಾಗಿದೆ. ವಿಮಾನಗಳ ಸಂಚಾರ ಸ್ಥಗಿತಗೊಂಡ ಬೆನ್ನಲ್ಲೇ, ಟೆಹರಾನ್‍ನಿಂದ ದುಬೈಗೆ ಹೊರಡಬೇಕಿದ್ದ `ಇರಾನ್ ಏರ್‍ಟೂರ್' ವಿಮಾನವು ಹೊರಡುವ ಕೆಲವೇ ಕ್ಷಣಗಳ ಮೊದಲು ರದ್ದಾಯಿತು' ಎಂದು `ಐಎಸ್‍ಎನ್‍ಎ' ಸುದ್ದಿ ಸಂಸ್ಥೆ ವರದಿ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries