HEALTH TIPS

ವಿಶ್ವಸಂಸ್ಥೆ ಸುಧಾರಣೆ ಕೊರತೆ: ಹತಾಶೆ ಹೆಚ್ಚಳ-ಜೈಶಂಕರ್

ನ್ಯೂಯಾರ್ಕ್‌ (PTI): 'ವಿಶ್ವಸಂಸ್ಥೆಯ ಸುಧಾರಣೆಗಳ ಕೊರತೆಯಿಂದಾಗಿ ಅಂತರರಾಷ್ಟ್ರೀಯ ಸಮುದಾಯದಲ್ಲಿ ಹತಾಶೆ ಹೆಚ್ಚುತ್ತಿದೆ' ಎಂದು ಭಾರತೀಯ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.


ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ ಅಂಗವಾಗಿ ಅಬ್ಸರ್ವರ್‌ ರಿಸರ್ಚ್‌ ಫೌಂಡೇಶನ್‌, ರಿಲಯನ್ಸ್‌ ಫೌಂಡೇಶನ್‌, ಭಾರತದಲ್ಲಿನ ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭಾರತದ ಕಾಯಂ ನಿಯೋಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

'ನಾವು ಸುಧಾರಣೆಯ ಬಗ್ಗೆ ಗಂಭೀರ ವಾಗಿದ್ದರೆ, ನಮಗೆ ಲಿಖಿತ ಪಠ್ಯ ಆಧಾರಿತ ಮಾತುಕತೆಯ ಅಗತ್ಯವಿದೆ. ಏಕೆಂದರೆ, ಯಾವುದೇ ಲಿಖಿತ ಪಠ್ಯವಿಲ್ಲದೆ ಸಂಧಾನ ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಅದು ಸಂಧಾನವೇ ಅಲ್ಲ, ಬದಲಿಗೆ ಕೇವಲ ಸಮಯವನ್ನು ವ್ಯರ್ಥ ಮಾಡುವುದು ಅಷ್ಟೇ ಆಗುತ್ತದೆ. ಇದೇ ಕಾರಣಕ್ಕೆ ಈಗ ನಿರಾಶೆಗಳು ಹೆಚ್ಚುತ್ತಿವೆ' ಎಂದಿದ್ದಾರೆ.

'ವಿಶ್ವಸಂಸ್ಥೆಯು ವಿಭಿನ್ನವಾಗಿ ರಬೇಕು ಮತ್ತು ವಾಸ್ತವ ಪ್ರಪಂಚಕ್ಕೆ ಹೆಚ್ಚು ಅನುಗುಣವಾಗಿರಬೇಕು ಎಂಬ ಭಾವನೆ ಅಂತರರಾಷ್ಟ್ರೀಯ ಸಮುದಾಯದಲ್ಲಿದೆ' ಎಂದು ಹೇಳಿದ್ದಾರೆ.

'ವಿಶ್ವಸಂಸ್ಥೆಯು ಕಾಲಕ್ಕೆ ತಕ್ಕಂತೆ ಬದಲಾಗದೆ ಹಿಂದೆ ಬಿದ್ದಿರುವಂತೆ ಕಾಣುತ್ತಿದೆ. ಇದು ವಿಶ್ವಸಂಸ್ಥೆಯ ವಿರೋಧಿತನವಲ್ಲ. ವಾಸ್ತವವಾಗಿ, ಅದರ ಬಗ್ಗೆ ಕಾಳಜಿ ಇರುವವರೇ ಅದರಲ್ಲಿ ಸುಧಾರಣೆ ತರಲು ಬಯಸುತ್ತಾರೆ. ಆದರೆ, ಯಾರು ಈ ಸುಧಾರಣೆಯನ್ನು ವಿರೋಧಿಸುತ್ತಾರೋ, ಅವರಿಗೆ ವಿಶ್ವಸಂಸ್ಥೆಯ ಬಗ್ಗೆ ನಿಜವಾದ ಕಾಳಜಿ ಇಲ್ಲ. ಅವರು ವಿಶ್ವಸಂಸ್ಥೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries