HEALTH TIPS

ಮಕ್ಕಳ ಡಿಜಿಟಲ್ ಮಾಧ್ಯಮ ಬಳಕೆ, ಶಾಲೆಗಳಲ್ಲಿ ಸ್ಮಾರ್ಟ್ಫೋನ್ ನಿಷೇಧ ಕುರಿತು ರಾಷ್ಟ್ರೀಯ ನೀತಿ ಅಗತ್ಯ: ವರದಿ

ನವದೆಹಲಿ: ಶಾಲೆಗಳಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಮತ್ತು ಆನ್ಲೈನ್ ತಾಣಗಳಿಗೆ ವಯೋ ನಿರ್ಬಂಧಿತ ಪ್ರವೇಶ ಸೇರಿದಂತೆ ಮಕ್ಕಳಲ್ಲಿ ಡಿಜಿಟಲ್ ಮಾಧ್ಯಮಗಳ ಬಳಕೆಯನ್ನು ನಿಯಂತ್ರಿಸಲು ರಾಷ್ಟ್ರೀಯ ನೀತಿಗಾಗಿ ಲೀಗಲ್ ಆಯಕ್ಷನ್ ಆಯಂಡ್ ಬಿಹೇವಿಯರ್ ಚೇಂಜ್ ತನ್ನ ವರದಿಯಲ್ಲಿ ಆಗ್ರಹಿಸಿದೆ.


ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಕಾನೂನುಬದ್ಧ ಜವಾಬ್ದಾರಿಗಳು ಮತ್ತು ದಂಡಗಳನ್ನು ನಿಗದಿಪಡಿಸಬೇಕು. ಹೊಣೆಯನ್ನು ಮಕ್ಕಳು ಅಥವಾ ಪೋಷಕರ ಮೇಲೆ ಎಂದಿಗೂ ಹೊರಿಸಬಾರದು ಎಂದು ಅದು ಸೂಚಿಸಿದೆ.

'ಪ್ರಿವೆನ್ಷನ್ ಬೈ ಡಿಸೈನ್: ಫ್ರಮ್ ವಾಲಂಟರಿ ಸೆಲ್ಫ್-ರೆಗ್ಯುಲೇಷನ್ ಟು ಎ ಸ್ಟೇಟ್ ಡ್ಯೂಟಿ ಆಫ್ ಕೇರ್' ಶೀರ್ಷಿಕೆಯ ವರದಿಯನ್ನು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಅಥೆನಾ ಇನ್ಫೊನಾಮಿಕ್ಸ್ ಮತ್ತು ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (ಜೆಆರ್ಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಮಕ್ಕಳ ಸುರಕ್ಷತೆಯು ಇನ್ನು ಮುಂದೆ ಪ್ಲಾಟ್ಫಾರ್ಮ್ಗಳ ಸ್ವಯಂ-ಉಸ್ತುವಾರಿಗೆ ಸೀಮಿತವಾಗಿರದೆ ಸರ್ಕಾರದ ಕಾನೂನುಬದ್ಧ ಜವಾಬ್ದಾರಿಯಾಗಬೇಕು ಎಂದು ಪ್ರತಿಪಾದಿಸಿರುವ ವರದಿಯು, ಶಾಲೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಮಾರ್ಟ್ಫೋನ್ ಬಳಕೆಯನ್ನು ನಿಷೇಧಿಸುವುದನ್ನು ಬೆಂಬಲಿಸಿದೆ.

52 ದೇಶಗಳಲ್ಲಿ ಶಾಲೆಗಳಲ್ಲಿ ಸ್ಮಾರ್ಟ್ಫೋನ್ ಬಳಕೆಯನ್ನು ರಾಷ್ಟ್ರೀಯ ಕಾನೂನಿನ ಮೂಲಕ ನಿಷೇಧಿಸಲಾಗಿದೆ ಮತ್ತು 31 ದೇಶಗಳು ಮಾರ್ಗಸೂಚಿಗಳನ್ನು ಹೊರಡಿಸಿವೆ ಎಂದು ಉಲ್ಲೇಖಿಸಿರುವ ವರದಿಯು, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದೆ.

ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಿದ ನಂತರ ಬದಲಾವಣೆಗಳಾಗಿವೆ. ಆನ್ಲೈನ್ ಪ್ಲಾಟ್ಫಾರ್ಮ್ಗಳೊಂದಿಗೆ ಕಟ್ಟುನಿಟ್ಟಾದ ಒಪ್ಪಂದಗಳನ್ನು ಮಾಡಿಕೊಳ್ಳಲು ಕನಿಷ್ಠ ವಯಸ್ಸು ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಅಮೆರಿಕದಲ್ಲಿ ಇದು 14-16 ವರ್ಷಗಳಿದ್ದರೆ, ಭಾರತದಲ್ಲಿ ಈ ಮಿತಿ 18 ವರ್ಷವಾಗಿದೆ; ಅಂದರೆ ಅಪ್ರಾಪ್ತ ವಯಸ್ಕರು ಮಾಡಿಕೊಳ್ಳುವ ಒಪ್ಪಂದವು ಆರಂಭದಿಂದಲೂ ಅಮಾನ್ಯವೆಂದು ಪರಿಗಣಿಸಲ್ಪಡುತ್ತದೆ ಎಂದು ವರದಿಯು ಬೆಟ್ಟು ಮಾಡಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries