ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 60 ದಿವಸಗಳ ಭಜನಾ ಸಂಕೀರ್ತನೆ, ಸಾಂಸ್ಕøತಿಕ ಸತ್ರದ ಸಮಾರೋಪ ಹಾಗೂ ಆರನೇ ಪೀಠಾರೋಹಣವಾರ್ಷಿಕೋತ್ಸವ, ಅಮೋಘ ಯಕ್ಷಗಾನ ಪ್ರದರ್ಶನದೊಂದಿಗೆ ಶನಿವಾರ ಸಂಪನ್ನಗೊಂಡಿತು.
ವ್ರತಾಚರಣೆಯ ಸಮಾರೋಪದ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ದಕ್ಷಿಣಾಮೂರ್ತಿ ಹವನ ಮತ್ತು ಗೋಪಾಲಕೃಷ್ಣ ಹವನ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಶ್ರೀಮಠದ ಶಿಷ್ಯರು, ಅಭಿಮಾನಿ ವರ್ಗ ಹಾಗೂ ವಿವಿಧ ವಲಯದ ಪ್ರಮುಖರು ಭಾಗವಹಿಸಿದ್ದರು.
ಬೆಳಗ್ಗೆ ಪ್ರಾತಃಕಾಲದ ಪೂಜೆ, ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ, ನಂತರ ಕಾಸರಗೋಡು ಶ್ರೀ ಪದ್ಮಶ್ರೀಯ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಯೋಗ ನೃತ್ಯ, ಗಣಪತಿಹವನ, ದಕ್ಷಿಣಾಮೂರ್ತಿ ಹವನ, ಗೋಪಾಲಕೃಷ್ಣ ಹವನ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ ಎಡನೀರುಶ್ರೀಗಳಿಂದ ಮಂತ್ರಾಕ್ಷತೆ ವಿತರಣೆ ನಡೆಯಿತು.
ಸಾಂಸ್ಕøಥಿಕ ಕಾರ್ಯಕ್ರಮದ ಅಂಗವಾಗಿ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನ ಪ್ರಾಯೋಜಿತ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ಸಮಾರೋಪ ಸಮಾರಂಭದಲ್ಲಿ ಪೀಠಾರೋಹಣ ವಾರ್ಷಿಕೋತ್ಸವ ಸನ್ಮಾನ ನಡೆಯಿತು.
ರಾತ್ರಿ ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದಿಂದ 'ಚಿತ್ರಾಕ್ಷಿ ಕಲ್ಯಾಣ, ಶ್ರೀರಂಗ ತುಲಾಭಾರ ಹಾಗೂ ಗಿರಿಜಾ ಕಲ್ಯಾಣ-ಕುಮಾರ ವಿಜಯ'ಎಂಬ ಅಮೋಘ ಯಕಷಗಾನ ಬಯಲಾಟ ಜರುಗಿತು.
ಕಳೆದ 60 ದಿನಗಳ ಚಾತುರ್ಮಾಸ್ಯ ವ್ರತಾಚರಣೆ ಸಮಾರಂಭದಲ್ಲಿ ನಿರಂತರವಾಗಿ ಭಜನಾ ಸಂಕೀರ್ತನೆ, ಸಂಗೀತ, ಕಥಕ್ಕಳಿ, ಒಟ್ಟಂತುಳ್ಳಲ್, ಭರತನಾಟ್ಯ, ತಾಳಮದ್ದಳೆ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಭಿಕ್ಷಾಸೇವೆ ಯೋಜಿಸಲಾಘಿತ್ತು. ಪಾದಪೂಜೆ, ಶ್ರೀಚಕ್ರ ನವಾವರಣ ಪೂಜೆ, ದುರ್ಗಾಪೂಜೆ ಹಾಗೂ ಆರಾಧನೋತ್ಸವ ಸೇರಿದಂತೆ ಧಾರ್ಮಿಕ ವಿಧಿವಿಧಾನ ನಡೆಯಿತು.



