ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ಕೇರಳ ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ನಿಕಟ ಪೂರ್ವ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು. ಚೆಂಗಳ ಆಯುರ್ವೇದ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ. ಫಾತಿಮಾ ಯಾಸ್ಮಿನ್ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿಕೊಟ್ಟರು. ಯೋಗಾಧ್ಯಾಪಿಕೆ ದಿವ್ಯ ಕೆ. ವಿ. ಯೋಗಾಸನಗಳನ್ನು ತಿಳಿಸಿಕೊಟ್ಟರು. ಹಿರಿಯರು ಕುರ್ಚಿಯಲ್ಲಿ ಕುಳಿತು ಮಾಡಬಹುದಾದ ಆಸನಗಳನ್ನು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ತರಬೇತಿ ಶಿಬಿರವನ್ನು ಉದ್ಘಾಟಿಸಿ ಆಯುರ್ವೇದವು ಕೇವಲ ರೋಗ ನಿವಾರಣೆಗಷ್ಟೇ ಅಲ್ಲದೆ, ರೋಗ ಬಾರದಂತೆ ತಡೆಯುವ ಜೀವನ ಪದ್ಧತಿಯಾಗಿದೆ. ನಮ್ಮ ಅಡುಗೆಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳು ಹಾಗೂ ಹಿತ್ತಲಿನ ಮೂಲಿಕೆಗಳನ್ನು ಬಳಸಿಕೊಂಡು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ನಾವು ಜಾಗೃತರಾಗಿರಬೇಕು. ಆರೋಗ್ಯಕರ ದೇಹ ಮತ್ತು ಮನಸ್ಸು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಸಂಪತ್ತು. ಆಧುನಿಕ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಬದಲಾವಣೆಯಿಂದಾಗಿ ಇಂದು ಉಂಟಾಗುತ್ತಿರುವ ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ಶಾಶ್ವತ ಮತ್ತು ನೆ`ಸರ್ಗಿಕ ಪರಿಹಾರಗಳಿವೆ ಎಂದರು.
ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷ ಅವಿನಾಶ ರೈ, ಹಿರಿಯ ನಾಗರಿಕರ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ಪೆರ್ಮುಖ ಈಶ್ವರ ಭಟ್, ಗ್ರಾಮಪಂಚಾಯಿತಿ ಸದಸ್ಯೆ ಶಾಹಿನಾ ಅನ್ವರ್ ಶುಭಾಶಂಸನೆಗೆ`ದರು. ಫಾರ್ಮಸಿಸ್ಟ್ ಪ್ರಸೀದ ಸ್ವಾಗತಿಸಿ, ದಿವ್ಯ ವಂದಿಸಿದರು.

.jpg)
.jpg)
