ಪೆರ್ಲ: ಪೆರ್ಲ ಪೇಟೆಯ ಮಧ್ಯೆಯಿರುವ ಬ್ಯಾಟರಿ ಅಂಗಡಿಯೊಂದರಿಂದ ಹಾಡ ಹಗಲು ಡ್ರಾಯರಿಂದ ಏಳು ಸಾವಿರ ರೂ. ನಗದು ಎಗರಿಸಲಾಗಿದೆ. ಆರೋಪಿ ಸಂಚರಿಸುವ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಾಗಿದ್ದು, ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಾಯಿಪ್ಪಾಡಿ ನಿವಾಸಿ, ಪೆರ್ಲ ಪೇಟೆಯಲ್ಲಿ ದೀರ್ಘ ಕಾಲದಿಂದ ಬ್ಯಾಟರಿ ಅಂಗಡಿ ನಡೆಸುತ್ತಿರುವ ರವಿ ಕುಮಾರ್ ಎಂಬವರ ಅಂಗಡಿಯಿಂದ ಈ ಕಳವು ನಡೆದಿದೆ. ರವಿ ಅವರು ಸನಿಹದ ಅಂಗಡಿಗೆ ತೆರಳಿದ್ದ ಸಂದರ್ಭ ನೋಡಿ ಹಣ ಎಗರಿಸಲಾಗಿದೆ. ಅಂಗಡಿ ಆಸುಪಾಸು ಪ್ಯಾಂಟು ಶರ್ಟ್ ಧರಿಸಿದ ಅಪರಿಚಿತ ಯುವಕನೊಬ್ಬ ಸುತ್ತಾಡುತ್ತಿದ್ದು, ನೇರ ಅಂಗಡಿಗೆ ಆಗಮಿಸಿ ಡ್ರಾಯರಿಂದ ಹಣ ಎಗರಿಸಿ ಪರಾರಿಯಾಗುವ ದೃಶ್ಯ ಸನಿಹದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

