ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಪ್ತಿಯ ನೆಲ್ಲಿಯಡ್ಕ ಬಸ್ ನಿಲ್ದಾಣ ವಠಾರದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಕುಟು-ಕುಟು ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಬಡಜೆ ನಿವಾಸಿ ದಿನೇಶ್ (40), ಕುಂಬ್ಡಾಜೆ ಬಳ್ಳಪದವಿನ ನವೀನ್ ಪ್ರಕಾಶ್ (50), ಜಯೇಶ್ (36), ನಾರಂಪಾಡಿ ನೆಲ್ಲಿಯಡ್ಕದ ಸತೀಶ್.ಪಿ (31), ಉಬೈಸ್ (29) ಮತ್ತು ಬೆಳ್ಳೂರು ಕೊಡಿಯಡ್ಕ ನಿವಾಸಿ ಕೃಷ್ಣನ್ (25) ಬಂಧಿತರು.
ಇವರಿಂದ 2,290 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬದಿಯಡ್ಕ ಠಾಣೆ ಎಸ್‍ಐ ಸುನಿಲ್ ಕುಮಾರ್ ನೇತೃತ್ವದ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಜೂಜಾಟ ದಂಧೆಯಲ್ಲಿ ನಿರತರಾಗಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ದಾಳಿ ನಡೆಸಿದ್ದಾರೆ.


