HEALTH TIPS

ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದಿನಾಂಕ ಘೋಷಣೆ

ಕಾಸರಗೋಡು: ನಗರದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿಲಾಮಯ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಣೆ ದೇವಸ್ತಾನದಲ್ಲಿ ಜರುಗಿತು.  ಕ್ಷೇತ್ರದ ಪ್ರಮುಖರಾದ ವಕೀಲ ಮಹಾಬಲ ಶೆಟ್ಟಿ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಿಸಿದರು. 


ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ ಕೋಟೆಕುಂಜತ್ತಾಯ, ಕ್ಷೇತ್ರದ ಪೂರ್ವ ಅರ್ಚಕ ಹರೀಶ ಪುಣಿಂಚಿತ್ತಾಯ ಭಾಗಮಂಡಲ, ಜೀರ್ಣೋದ್ಧಾರ ಸಮಿತಿ  ಉಪಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ, ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮಹಿಳಾ ಸಮಿತಿಯ   ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು. 

ಮಿತಿ ಕೋಶಾಧಿಕಾರಿ ಜಗದೀಶ್ ಪ್ರಸಾದ್ ಲೆಕ್ಕಪತ್ರ ಮಂಡಿಸಿದರು. ನವೀಕರಣ ಜತೆ ಕಾರ್ಯದರ್ಶ ರೇವತಿ ಟೀಚರ್ ಸ್ವಾಗತಿಸಿದರು. ಸಮಿತಿಯ ಜತೆ ಕಾರ್ಯದರ್ಶಿ ಮನೋಹರ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.  ಪ್ರಧಾನ ಕಾರ್ಯದರ್ಶಿ ರವಿಶಂಕರ್ ಕಾಮತ್ ವಂದಿಸಿದರು. ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2027 ಮೇ ತಿಂಗಳ 4 ರಿಂದ 12 ರ ವರೆಗೆ ಜರಗಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries