HEALTH TIPS

ಯುಐಡಿಎಐನ ಕಾಗದರಹಿತ ಗುರುತು ಪರಿಶೀಲನೆ ವ್ಯವಸ್ಥೆ ಅಳವಡಿಸಿಕೊಂಡ ಪಂಜಾಬ್ ಶಾಲಾ ಶಿಕ್ಷಣ ಮಂಡಳಿ

ಚಂಡೀಗಡ: ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯು (ಪಿಎಸ್‌ಇಬಿ) ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಫ್‌ಲೈನ್ ಪರಿಶೀಲನಾ ವ್ಯವಸ್ಥೆಯನ್ನು (ಒವಿಎಸ್‌ಇ) ಅಳವಡಿಸಿಕೊಂಡಿದೆ. ಇದರೊಂದಿಗೆ ಇದು ಸಮ್ಮತಿ ಆಧಾರಿತ ಮತ್ತು ಕಾಗದರಹಿತ ಡಿಜಿಟಲ್ ಗುರುತಿನ ಪರಿಶೀಲನೆಯನ್ನು ಜಾರಿಗೆ ತಂದ ದೇಶದ ಮೊದಲ ಶಿಕ್ಷಣ ಮಂಡಳಿಯಾಗಿದೆ.


ಈ ಹೊಸ ಚೌಕಟ್ಟಿನ ಮೂಲಕ ಅರ್ಹ ಸಂಸ್ಥೆಗಳು ಕೇಂದ್ರ ಗುರುತು ದತ್ತಾಂಶ ಭಂಡಾರವನ್ನು (ಸಿಐಡಿಆರ್) ಪ್ರವೇಶಿಸದೆ, ಸುರಕ್ಷಿತ ಕ್ರಮಗಳ ಮೂಲಕ ವ್ಯಕ್ತಿಗಳ ಗುರುತು ಮತ್ತು ಸಂಬಂಧಿತ ರುಜುವಾತುಗಳನ್ನು ಪರಿಶೀಲಿಸಬಹುದಾಗಿದೆ. ಆನ್‌ಲೈನ್ ಮತ್ತು ಏಕ-ಗವಾಕ್ಷಿ ಶಿಕ್ಷಣ ಮಂಡಳಿಯ ಸೇವೆಗಳನ್ನು ಒದಗಿಸುವಾಗ ಗುರುತಿನ ಪರಿಶೀಲನೆಗಾಗಿ ಪಿಎಸ್‌ಇಬಿ ಈ ಸೌಲಭ್ಯವನ್ನು ಬಳಸಿಕೊಳ್ಳಲಿದೆ.

ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ (ಎಂಡಿಯು) ಕೂಡ ಒವಿಎಸ್‌ಇ ಆಗಿ ಯುಐಡಿಎಐನೊಂದಿಗೆ ನೋಂದಾಯಿಸಿಕೊಂಡಿದ್ದು, ಹಾಗೆ ಮಾಡಿದ ದೇಶದ ಮೊದಲ ವಿವಿ ಎನಿಸಿಕೊಂಡಿದೆ.

ನೋಂದಣಿ, ಪ್ರವೇಶಾತಿ, ಪರೀಕ್ಷೆಗಳು ಮತ್ತು ವಿದ್ಯಾರ್ಥಿಗಳ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಡಿಜಿಟಲ್ ಗುರುತಿನ ಪರಿಶೀಲನೆಯನ್ನು ಬಳಸಲು ಈ ಚೌಕಟ್ಟು ವಿವಿಗೆ ಅವಕಾಶ ನೀಡುತ್ತದೆ.

ಶಿಕ್ಷಣ ವಲಯದಲ್ಲಿ ಈ ಚೌಕಟ್ಟನ್ನು ಅಳವಡಿಸಿಕೊಳ್ಳುವುದರಿಂದ ಪ್ರವೇಶಾತಿ, ಪರೀಕ್ಷೆಗಳು ಹಾಗೂ ಶೈಕ್ಷಣಿಕ ದಾಖಲೆಗಳು ಮತ್ತು ಪ್ರಮಾಣಪತ್ರಗಳ ವಿತರಣೆ ಮತ್ತು ಪರಿಶೀಲನೆ ಸೇರಿದಂತೆ ವಿದ್ಯಾರ್ಥಿ ಜೀವನದ ವಿವಿಧ ಹಂತಗಳಲ್ಲಿ ಗುರುತಿನ ಪರಿಶೀಲನೆಗೆ ಸುಗಮವಾಗುತ್ತದೆ.

ಒವಿಎಸ್‌ಇ ಯುಐಡಿಎಐ ಚೌಕಟ್ಟಿಗೆ ಅನುಗುಣವಾಗಿ ಆಧಾರ್ ಸಂಖ್ಯೆ ಹೊಂದಿರುವವರ ಆಫ್‌ಲೈನ್ ಪರಿಶೀಲನೆಯನ್ನು ಕೈಗೊಳ್ಳಲು ಅಧಿಕೃತ ವ್ಯವಸ್ಥೆಯಾಗಿದೆ. ವ್ಯಕ್ತಿಯು ತನ್ನ ಸಮ್ಮತಿಯೊಂದಿಗೆ ಹಂಚಿಕೊಳ್ಳುವ ಆಧಾರ್ ಪರಿಶೀಲಿಸಬಹುದಾದ ರುಜುವಾತುಗಳನ್ನು ಪರಿಶೀಲಿಸಲು ಇದು ಸಂಸ್ಥೆಗಳಿಗೆ ಅನುವು ಮಾಡಿಕೊಡುತ್ತದೆ. ಈ ರುಜುವಾತುಗಳನ್ನು ಸಂಪೂರ್ಣವಾಗಿ ಅಥವಾ ಆಯ್ದ ಭಾಗಗಳಾಗಿ ಹಂಚಿಕೊಳ್ಳಬಹುದು.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries