HEALTH TIPS

ಜನರನ್ನು ಸಚ್ಚಾರಿತ್ರ್ಯವಂತರನ್ನಾಗಿಸುವಲ್ಲಿ ಧರ್ಮ, ಕಲೆಗಳ ಕೊಡುಗೆ ಅಪಾರ-ಚಾತುರ್ಮಸ್ಯ ಮಂಗಲೋತ್ಸವದಲ್ಲಿ ಎಡನೀರುಶ್ರೀ ಆಶೀರ್ವಚನ

ಕಾಸರಗೋಡು: ಧರ್ಮ ಮತ್ತು ಕಲೆ ನಮ್ಮ ದೇಶದ ಸಂಸ್ಕøತಿಯ ಭದ್ರ ಬುನಾದಿಯಾಗಿದ್ದು, ಇವು ಜನರನ್ನು ಸಚ್ಚಾರಿತ್ರ್ಯವಂತ ಸಂಸ್ಕಾರಗಳಿಂದ ಕೂಡಿದ ಸತ್ಪ್ರಜೆಗಳನ್ನಾಗಿ ರೂಪಿಸುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. 


ಅವರು ಎಡನೀರು ಮಠದಲ್ಲಿ ತಮ್ಮ ಷಷ್ಠ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಡೆದ 60ದಿನಗಳ ಕನ್ನಡ ಸಾಂಸ್ಕೃತಿಕ ಕಲೋತ್ಸವದ ಮಂಗಲೋತ್ಸವದಲ್ಲಿ ಆಶೀರ್ವಚನ ನೀಡಿದರು. ಮಠ, ಮಂದಿರ ಸಹಿತ ದೇವಾಲಯಗಳಲ್ಲಿ ವೈದಿಕ, ಧಾರ್ಮಿಕ ಆಚರಣೆಯೊಂದಿಗೆ ಕಲೆಗೂ ಪ್ರಾಶಸ್ತ್ಯ ನೀಡಿದಾಗ ಕಲೆ ಅಭಿವೃದ್ಧಿಗೊಳ್ಳಲು ಸಾಧ್ಯ, ಈ ಪರಂಪರೆಯನ್ನು ಎಡನೀರು ಮಠ ಹಿಂದಿನಿಂದಲೂ ಪರಿಪಾಲಿಸುತ್ತಾ ಬಂದಿರುವುದಾಗಿ ತಿಳಿಸಿದರು.  

ಸಮಾರಂಭದಲ್ಲಿ ಶ್ರೀಗಳವರ ಪೀಠಾರೋಹಣ ವಧರ್ಂತಿಯ ಅಂಗವಾಗಿ ಕಾಸರಗೋಡಿನಲ್ಲಿ ಸತತ ಐವತ್ತು ವರ್ಷಗಳಿಂದ ಸಂಗೀತ ಶಿಕ್ಷಣ ಧಾರೆಯೆರೆದ ಹಿರಿಯ ಸಂಗೀತಜ್ಞ ಕಲ್ಮಾಡಿ ಸದಾಶಿವ ಆಚಾರ್ ಅವರನ್ನು ದಂಪತಿ ಸಹಿತ ಶ್ರೀಮಠದ ಪರವಾಗಿ ಸ್ವಾಮೀಜಿ ಸನ್ಮಾನಿಸಿ ಹರಸಿದರು. ಅರ್ಥದಾರಿ, ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗರು ಅಭಿನಂಧನಾ ಭಾಷಣ ಮಾಡಿದರು.

ಈ ಸಂದರ್ಭ ಎಡನೀರು ಸನಿಹದ ಮೋಪಾಲ ಮಹಾವಿಷ್ಣು ದೇವಳದ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣಪತ್ರಿಕೆ ಬಿಡುಗಡೆ ಹಾಗೂ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ 2027 ಮೇ 4ರಿಂದ 12ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಣೆಯೂ ನಡೆಯಿತು.

ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಉಪಸ್ಥಿತರಿದ್ದರು. ಚಾತುರ್ಮಾಸ್ಯ ಆಚರಣಾ ಅವಧಿಯಲ್ಲಿ ನಿರಂತರ ಅರುವತ್ತು ದಿನಗಳ ಭಜನಾ ಸೇವೆ ಸಂಯೋಜಿಸಿದ ವೀಣಾ ಕಡಮಣ್ಣಾಯ ದಂಪತಿಯನ್ನು ಶ್ರೀಗಳು ಗೌರವಿಸಿದರು.

ಕಾರ್ಯಕ್ರಮದಲ್ಲಿ ಎಡನೀರುಶ್ರೀಗಳ ಆರನೇ ವರ್ಷದ ಚಾತುರ್ಮಾಸ್ಯ ನೆನಪಿಗಾಗಿ ಕಾಸರಗೋಡು ಸೇವಾ ಭಾರತಿಯ ಸಾಮಾಜಿಕ ಸೇವಾ ಘಟಕಕ್ಕೆ ಮೂರು ವೀಲ್ ಚೇರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಲಾಯಿತು. ಸಮಾರಂಭದಲ್ಲಿ ಸಂಸದ ರಾಜಮೋಹನ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು.  ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಕಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದಿಂದ 'ಚಿತ್ರಾಕ್ಷಿ ಕಲ್ಯಾಣ, ಶ್ರೀರಂಗ ತುಲಾಭಾರ ಹಾಗೂ ಗಿರಿಜಾ ಕಲ್ಯಾಣ-ಕುಮಾರ ವಿಜಯ'ಎಂಬ ಅಮೋಘ ಯಕಷಗಾನ ಬಯಲಾಟ ಜರುಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries