HEALTH TIPS

ಎನ್.ಎಚ್.ಎಸ್.ಎಸ್. ಪೆರಡಾಲದಲ್ಲಿ ಸ್ಥಾಪಕರ ದಿನಾಚರಣೆ

ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸಂಸ್ಥಾಪಕ ಪೊಸಣಿಕೆ ಸುಬ್ರಹ್ಮಣ್ಯ ಶಾಸ್ತ್ರಿ(ಪಿ.ಎಸ್.ಶಾಸ್ತ್ರಿ) ಅವರ ಸ್ಥಾಪಕರ ದಿನವನ್ನು ಶಾಲೆಯಲ್ಲಿ ಆಚರಿಸಲಾಯಿತು. ಸಹ ಮುಖ್ಯೋಪಾಧ್ಯಾಯ ವಿ.ಇ.ಉಣ್ಣಿಕೃಷ್ಣನ್ ಅವರು ಸ್ಥಾಪಕರಾದ ಡಾ. ಪಿ. ಎಸ್. ಶಾಸ್ತ್ರಿ ಅವರ ಪ್ರತಿಮೆಗೆ ಹಾಪಾರ್ಪಣೆಗೈದು ಪುಷ್ಪನಮನ ಸಲ್ಲಿಸಿದರು. ಶಿಕ್ಷಕ ನಿರಂಜನ್ ರೈ ಪೆರಡಾಲ ಮಾತನಾಡಿ ಪಿ.ಎಸ್. ಶಾಸ್ತ್ರಿ 1944 ರಲ್ಲಿ ಊರವರ ಮತ್ತು ಪ್ರಸಿದ್ಧ ಮನೆತನಗಳು ಸಹಕಾರದೊಂದಿಗೆ ನವಜೀವನ ಶಾಲೆಯನ್ನು ಸ್ಥಾಪಿಸಲು ನೇತೃತ್ವ ನೀಡಿದವರು. ಸ್ವಾತಂತ್ರ್ಯ ಹೋರಾಟಗಾರರಾಗಿ ವೈದ್ಯರಾಗಿ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಕಾಸರಗೋಡು ಜಿಲ್ಲೆಯ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳ ರೂವಾರಿ, ಬದಿಯಡ್ಕ ಗಾಂಧಿ ಎಂದೇ ಪ್ರಸಿದ್ಧರಾಗಿದ್ದರು ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಶಿಕ್ಷಕ ರಾಜೇಶ್ ಮಾಸ್ತರ್ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಟರಾಜರಾಜ್, ನಾರಾಯಣ ಆಸ್ರ,  ಹರೀಶ್ ಎಸ್.ಕೆ., ಬಾಲಕೃಷ್ಣ, ಸತೀಶ್, ಗೋಪಾಲಕೃಷ್ಣ, ಯಜ್ಞೇಶ ಮತ್ತು ಶ್ರೀಕೃಷ್ಣ ಉಪಸ್ಥಿತರಿದ್ದು ಮಾತನಾಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries