ಮಂಜೇಶ್ವರ: ನವಯುವಕ ಕಲಾ ವೃಂದ ಗ್ರಂಥಾಲಯ ಚಿನಾಲ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಿವೃತ್ತ ಡಿಡಿಇ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಿವೃತ್ತ ಅಧ್ಯಾಪಕ ಬಾಬುರಾಯ ಆಚಾರ್ಯ ಅವರನ್ನು ಅವರ ಸ್ವಗೃಹ ಮೀಯಪದವು ಬೇರಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ದಾಸಪ್ಪ ಮಾಸ್ತರ್ ಉದ್ಘಾಟಿಸಿ, ಶಿಕ್ಷಕರ ಪಾತ್ರ ಹಾಗೂ ಗ್ರಂಥಾಲಯಗಳ ಮಹತ್ವದ ಕುರಿತು ಮಾತನಾಡಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ. ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಲತಾ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಪ್ರಭಾಕರ ಶೆಟ್ಟಿ, ಡಾ. ಅಕ್ಷಯ ಕುಮಾರ್ ಎಲಿಯಣ, ಸರಸ್ವತಿ, ಪದ್ಮಜಾ, ಮೋನಪ್ಪ ಪೂಜಾರಿ, ಮೊಹಮ್ಮದ್ ಚಿನಾಲ ಹಾಗೂ ಗ್ರಂಥಾಲಯದ ಸಕ್ರಿಯ ಸದಸ್ಯರು, ಗ್ರಂಥಪಾಲಕಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉದಯ ಸಿ.ಯಚ್. ವಂದಿಸಿದರು. ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
