HEALTH TIPS

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ; ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ; ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ!

 ನವದೆಹಲಿ: ಬ್ರಿಕ್ಸ್‌ನ (BRICS) ನಿಜವಾದ ಶಕ್ತಿಯು ಕೇವಲ ಅದರ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಗಾತ್ರಕ್ಕೆ ಸೀಮಿತವಾಗಿಲ್ಲ; ಬದಲಿಗೆ ಆ ಸಾಮರ್ಥ್ಯಗಳು ವ್ಯಾಪಾರ, ಹೂಡಿಕೆ ಮತ್ತು ಜಂಟಿ ಹಣಕಾಸು ವ್ಯವಸ್ಥೆಯ ಜಾಲವಾಗಿ ಪರಿವರ್ತನೆಗೊಂಡಾಗ ಅದು ಹೆಚ್ಚು ಸ್ಪಷ್ಟವಾಗುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿದ್ದಾರೆ.


ಶುಕ್ರವಾರ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನ ನಾಯಕರ ಸೆಷನ್ಸ್ ನಲ್ಲಿ ಮಾತನಾಡಿದ ಅವರು, ಸಂಭಾವ್ಯ ಸಹಕಾರದಿಂದ ಕಾರ್ಯರೂಪದ ಸಹಕಾರದತ್ತ ಪರಿವರ್ತನೆ"ಯಾಗುವ ಅಗತ್ಯವನ್ನು ತಿಳಿಸಿದರು.

ಇಂದಿನ ಜಗತ್ತು ಅತ್ಯಂತ ಸಂಕೀರ್ಣವಾದ ಅವಧಿಯನ್ನು ಎದುರಿಸುತ್ತಿದೆ. ಪೂರೈಕೆ ಸರಪಳಿಗಳಲ್ಲಿನ ವ್ಯತ್ಯಯಗಳು ಮತ್ತು ರಾಜಕೀಯ ಒತ್ತಡ ಹೇರಲು ಹೆಚ್ಚುತ್ತಿರುವ ಆರ್ಥಿಕ ಅಸ್ತ್ರ ಬಳಕೆಯು ಆರ್ಥಿಕ ವಾತಾವರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

"ಇಂದು ಜಗತ್ತು ಅತ್ಯಂತ ಸಂಕೀರ್ಣವಾದ ಹಂತದಲ್ಲಿದೆ. ಭೌಗೋಳಿಕ-ರಾಜಕೀಯ ಅನಿಶ್ಚಿತತೆ, ಪೂರೈಕೆ ಸರಪಳಿಗಳಲ್ಲಿನ ಅಡಚಣೆಗಳು ಮತ್ತು ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆಯು ಆರ್ಥಿಕ ವಾತಾವರಣವನ್ನು ಹೆಚ್ಚು ಸಂಕೀರ್ಣಗೊಳಿಸಿದೆ. ಈ ಸವಾಲುಗಳಿಗೆ ಬ್ರಿಕ್ಸ್‌ನ ಪ್ರತಿಕ್ರಿಯೆ ಏನು ಎಂಬುದು ಈಗಿರುವ ಪ್ರಶ್ನೆ," ಎಂದು ಅವರು ಹೇಳಿದರು.

"ಬ್ರಿಕ್ಸ್‌ನ ನಿಜವಾದ ಶಕ್ತಿಯು ಕೇವಲ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಗಾತ್ರಕ್ಕೆ ಸೀಮಿತವಾಗಿಲ್ಲ ಎಂದು ನಾವು ನಂಬುತ್ತೇವೆ. ಬದಲಿಗೆ, ಆ ಸಾಮರ್ಥ್ಯಗಳು ವ್ಯಾಪಾರ, ಹೂಡಿಕೆ ಮತ್ತು ಜಂಟಿ ಹಣಕಾಸು ವ್ಯವಸ್ಥೆಯ ಜಾಲವಾಗಿ ಪರಿವರ್ತನೆಗೊಂಡಾಗ ಅಂದರೆ ಸಂಭಾವ್ಯ ಸಹಕಾರದಿಂದ ಕಾರ್ಯರೂಪದ ಸಹಕಾರದತ್ತ ಸಾಗಿದಾಗ ಆ ಶಕ್ತಿಯು ಹೆಚ್ಚು ಸ್ಪಷ್ಟವಾಗುತ್ತದೆ ಎಂದರು.

ನವದೆಹಲಿಯಲ್ಲಿ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ ಬ್ರಿಕ್ಸ್ ಶೃಂಗಸಭೆ ಇಂದು  ಉದ್ಘಾಟನೆಯಾಗಲಿದೆ. ಇದಕ್ಕೂ ಮುನ್ನಾ ಬ್ರಿಕ್ಸ್ ಬಿಸಿನೆಸ್ ಫೋರಂ ಸಭೆ ನಡೆಯಿತು.

'ಗ್ಲೋಬಲ್ ಸೌತ್' (ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ) ವಲಯದಲ್ಲಿ ದಶಕಗಳ ಕಾಲ ಕಂಡುಬಂದ ನಿರಂತರ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳ ನಡುವೆ ಈ ಬ್ರಿಕ್ಸ್ ಸಭೆ ನಡೆಯುತ್ತಿದೆ ಎಂದು ಬ್ರೆಜಿಲ್‌ನ ವಿದೇಶಾಂಗ ಸಚಿವ ಮೌರೊ ವಿಯೆರಾ ಹೇಳಿದರು.













ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries