HEALTH TIPS

ಬಾಯಾರು ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧ ಪತ್ತೆ: ಸಿಪಿಎಂನಿಂದ ಪ್ರತಿಭಟನೆ

ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ನೀಡಿದ ಅಧಿಕೃತರ ಬೇಜವಾಬ್ದಾರಿ ವರ್ತನೆ ವಿರುದ್ಧ ಸಿಪಿಎಂ ಪ್ರತಿಭಟನೆ ನಡೆಸಿದೆ. ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅವಧಿ ಮೀರಿದ ಔಷಧಿಗಳನ್ನು ನೀಡಿದ್ದು, ರೋಗಿಗಳ ಆರೋಗ್ಯದ ಮೇಲೆ ಆಸ್ಪತ್ರೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿ ಇರಬೇಕಾದ ಔಷಧಿಗಳು ಇಲ್ಲ, ಅಗತ್ಯದ ನೌಕರರಿಲ್ಲವೆಂದು ಸಿಪಿಎಂ ದೂರಿದೆ.

ಈ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ಮುಳಿಗದ್ದೆ ವಾರ್ಡ್ ಸದಸ್ಯ ಝಕಾರಿಯ ಬಾಯಾರು ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಉದ್ಘಾಟಿಸಿದರು. ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾೈಕ್ ಮಾಣಿಪ್ಪಾಡಿ, ಚಿಪ್ಪಾರು ಲೋಕಲ್ ಕಾರ್ಯದರ್ಶಿ ಹಾರೀಸ್ ಪೈವಳಿಕೆ, ಪಂ. ಸದಸ್ಯೆ ದಿನೇಶ್ವರಿ ನಾಗೇಶ್ ಮಾತನಾಡಿದರು. ಅಬ್ದುಲ್ಲ ಕೆ, ಸದಾನಂದ ಕೆ, ರಾಜೇಶ್ ನೇತೃತ್ವ ನೀಡಿದರು. ಅಪ್ಸೀರ್ ಸ್ವಾಗತಿಸಿ, ರಫೀಕ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries