HEALTH TIPS

ವಿದ್ಯುತ್ ಇಲಾಖೆಯ 4 ಲಕ್ಷಕ್ಕೂ ಮಿಕ್ಕಿದ ಕೇಬಲ್ ಕಳವು-ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

ಪೆರ್ಲ: ವಿದ್ಯುತ್ ಇಲಾಖೆಯ ಪೆರ್ಲ ಸೆಕ್ಷನ್ ಕಚೇರಿ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿ  ಗುಣಾಜೆ ಆಸುಪಾಸು"ದ್ಯುತಿ" ಯೋಜನೆಯಂಗವಾಗಿ ನಡೆಸಬೇಕಿದ್ದ ಕೆಎಸ್‍ಇಬಿ ಕಾಮಗಾರಿಗಾಗಿ ತಂದಿಳಿಸಲಾಗಿದ್ದ ಅಲ್ಯುಮೀನಿಯಂ ಕೇಬಲ್‍ಗಳನ್ನು ಕಳವುಗೈದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಂತಾರಾಜ್ಯ ಕಳ್ಳರ ತಂಡವನ್ನು ಬದಿಯಡ್ಕ ಠಾಣೆ ಪೊಲೀಸರುಬಂಧಿಸಿದ್ದಾರೆ.

ಮಂಗಳೂರು ಸಮೀಪದ ಮಂಜನಾಡಿ, ಅಸೈಗೋಳಿ ನಿವಾಸಿ, ಪ್ರಸಕ್ತ ಎಣ್ಮಕಜೆ ಪಂಚಾaಯತಿ ಪೆರ್ಲ ಸಮೀಪದ ಅಡ್ಡದ ಬದ್ರಿಯಾ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿರುವ ನೌಶಾದ್ (34), ಕುಂಬಳೆ ಸಮೀಪದ ಪಂಜಿಕ್ಕಲ್ ನಿವಾಸಿ ಇಬ್ರಾಹಿಂ ಅವರ ಪುತ್ರ ಮೊಹಮ್ಮದ್ ಇ. (42), ಬಂಟ್ವಾಳ ತಾಲೂಕು ಪರಂಗಿಪೇಟೆ ಸಂಕಿಮುಲ್ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಮೊಹಮ್ಮದ್ ಶಾಹಿದ್ (29), ಬಂಟ್ವಾಳ ಬೈತುಲ್‍ಪದವು ನಿವಾಸಿ ನವೀನ್ (48) ಬಂಧಿತರು.

ಸೆ.24ರಂದು ನಸುಕಿಗೆ 2.30ರಿಂದ 4 ಗಂಟೆಯೊಳಗೆ ಮುಖವಾಡ ಧರಿಸಿದ ತಂಡ ಒಟ್ಟು 1,000 ಮೀಟರ್ ಎಲ್‍ಟಿ ಎಬಿ ಕೇಬಲ್‍ನ್ನು ಪಿಕಪ್ ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದು, ಈ ದೃಶ್ಯಾವಳಿ ಸನಿಹದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪೆರ್ಲ ವಿದ್ಯುತ್ ಸೆಕ್ಷನ್ ಅಸಿಸ್ಟೆಂಟ್ ಇಂಜಿನಿಯರ್ ಅವರ ದೂರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries