ಕಾಸರಗೋಡು: ಅರಣ್ಯ ಮತ್ತು ವನ್ಯಜೀವಿ ಇಲಾಖೆ ಆಯೋಜಿಸುವ ವನ್ಯಜೀವಿ ವಾರಾಚರಣೆಯ ಅಂಗವಾಗಿ ಅಕ್ಟೋಬರ್ 2ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಲೈವ್ ಮಾಡೆಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
'ಲಿವಿಂಗ್ ಇನ್ ಹಾರ್ಮನಿ ವಿತ್ ನೇಚರ್' ವಿಷಯದ ಬಗ್ಗೆ ಮಧ್ಯಾಹ್ನ 1.45ರಿಂದ ಸಂಜೆ 4.45ರವರೆಗೆ ಸ್ಪರ್ಧೆ ನಡೆಯಲಿದೆ. ಒಂದು ಶಾಲೆಯಿಂದ ಐದು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಕತ್ತರಿಸಿ ಸಿದ್ಧಪಡಿಸಿದ ಕಾರ್ಡ್‍ಬೋರ್ಡ್, ಕ್ಲೇ, ಬಣ್ಣಗಳು, ಪರಿಸರ ಸ್ನೇಹಿ ಸಾಮಗ್ರಿಗಳು ಹಾಗೂ ಇತರ ಅಲಂಕಾರಿಕ ವಸ್ತುಗಳೊಂದಿಗೆ ಶಾಲಾ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಮಧ್ಯಾಹ್ನ 1 ಗಂಟೆಯೊಳಗೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ (8547603836, 8547603838)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

