ಕುಂಬಳೆ: ವರದಕ್ಷಿಣೆಗಾಗಿ ಕಿರುಕುಳಕ್ಕೆ ಸಂಬಂಧಿಸಿ ಪತಿ ಸೇರಿದಂತೆ ಮೂವರ ವಿರುದ್ಧ ಕುಂಬಳೆ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳೂರು ಬಜ್ಜೆ ಬಂಕರ್ ಕೊಟೇಜ್‍ನ ಆಯಿಷಾ ಪಿ.ಎಚ್. (39)ಅವರ ದೂರಿನ ಮೇರೆಗೆ ಪತಿ ಅಬ್ದುಲ್ ಹಮೀದ್, ಅವರ ಸಂಬಂಧಿಕರಾದ ಶಬಾನಾ ಮತ್ತು ಸಾಜನ್ ಎಂಬವರ ವಿರುದ್ಧ ಈ ಕೇಸು.
2013 ಡಿಸೆಂಬರ್ 22ರಂದು ಅಬ್ದುಲ್ ಹಮೀದ್‍ರೊಂದಿಗೆ ಆಯಿಷಾ ವಿವಾಹ ನೆರವೇರಿತ್ತು. 2014 ಏಪ್ರಿಲ್‍ನಿಂದ ಕುಂಬಳೆಯಲ್ಲಿರುವ ಬಾಡಿಗೆ ಮನೆಯಲ್ಲಿ ಬಳಿಕ ಮಂಗಳೂರು ಬಜ್ಪೆಯ ಪತಿ ಮನೆಯಲ್ಲಿ ಮತ್ತಷ್ಟು ವರದಕ್ಷಿಣೆ ತಂದುಕೊಡುವಂತೆ ಪತಿ ಕಿರುಕುಳ ನೀಡಲಾರಂಭಿಸಿದ್ದಾರೆ. ಜತೆಗೆ ಇತರ ಇಬ್ಬರು ಆರೋಪಿಗಳಾದ ಶಬಾನಾ ಹಾಗೂ ಸಾಜನ್ ನನಗೆ ಮಾನಸಿಕ ಕಿರುಕುಳ ನೀಡುತ್ತಾ ಬಂದಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಆಯಿಷಾ ತಿಳಿಸಿದ್ದಾರೆ.


