ಕಾಸರಗೋಡು: ವಾಹನ ಅಪಘಾತದಿಂದ ಗಾಯಗೊಂಡಿರುವುದಾಗಿ ತಿಳಿಸಿ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತಪಟ್ಟಿದ್ದಾನೆ. ಮೂಲತಃ ಬೆಂಗಳೂರು ನಿವಾಸಿ, ಪ್ರಸಕ್ತ ಕುಂಬಳೆ ಸನಿಹದ ಕಳತ್ತೂರಿನಲ್ಲಿ ವಾಸಿಸುತ್ತಿದ್ದ ಅಸ್ಲಾಂ ಭಾಷಾ (39) ಸಾವಿಗೀಡಾದ ಯುವಕ. ಎರಡು ದಿನಗಳ ಹಿಂದೆ ಇವರ ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಪಘಾತ ಬಗ್ಗೆ ಕೇಸುಗಳಿಲ್ಲದೆ ಮಾತುಕತೆಮೂಲಕ ಪರಿಹರಿಸಿಕೊಳ್ಳಲಾಗಿರುವುದರಿಂದ ಈ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಬೇಕಾಗಿಲ್ಲವೆಂದೂ ಅಸ್ಲಾಂ ಭಾಷಾ ಆಸ್ಪತ್ರೆ ಅಧಿಕಾರಿಗಳಲ್ಲಿ ತಿಳಿಸಿದ್ದನು.
ಈ ಮಧ್ಯೆ ಅಸ್ಲಾಂ ಭಾಷಾ ಭಾನುವಾರ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನಗರ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡ ಪೆÇಲೀಸರು ಸೋಮವಾರ ಕಾಸರಗೋಡು ಬಸ್ ನಿಲ್ದಾಣ ವಠಾರದಿಂದ ಅಸ್ಲಾಂ ಭಾಷಾರನ್ನು ಪತ್ತೆಹಚ್ಚಿದ್ದು, ಮತ್ತೆ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಸೋಮವಾರ ರಾತ್ರಿ ಅಸ್ಲಾಂ ಭಾಷಾ ಮೃತಪಟ್ಟಿದ್ದಾರೆ. ಈ ಮೊದಲು ಕುಂಬಳೆ ಬದ್ರಿಯಾ ನಗರದಲ್ಲಿ ವಾಸಿಸುತ್ತಿದ್ದ ಅಸ್ಲಾಂ ಭಾಷಾ ಅವರ ಕುಟುಂಬ ಬಳಿಕ ಕಳತ್ತೂರಿಗೆ ವಾಸ್ತವ್ಯ ಬದಲಾಗಿಸಿದ್ದರು. ಅಸ್ಲಾಂ ಭಾಷಾ ಅಂಗಡಿಗಳ ಶಟರ್ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಯಾವ ವಾಹನ ಡಿಕ್ಕಿ ಅಥವಾ ಯಾವ ರೀತಿ ಅಪಘಾತ ಸಂಭವಿಸಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಾವಿನ ಬಗ್ಗೆ ಕುಟುಂಬದವರೂ ನಿಗೂಢತೆ ವ್ಯಕ್ತಪಡಿಸಿದ್ದಾರೆ.


