ಪೆರ್ಲ: ಸ್ವರ್ಗ-ವಾಣೀನಗರ ರಸ್ತೆಯ ಎರಡೂ ಬದಿ ದಟ್ಟವಾಗಿ ಬೆಳೆದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟುಮಾಡುತ್ತಿದ್ದ ಕಾಡು ಪೆÇದೆಗಳು ಹಾಗೂ ರಸ್ತೆಗೆ ಅಡ್ಡ ವಾಲಿನಿಂತಿದ್ದ ಮರಗಳ ಕೊಂಬೆಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.
ವಾಣೀನಗರ ವನ ಸಂರಕ್ಷಣಾ ಸಮಿತಿ (ವಿ.ಎಸ್.ಎಸ್.) ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಸ್ಥಳೀಯ ಸಂಘಟನೆಗಳಾದ ಮಿಲೇನಿಯಂ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವಾಣೀನಗರ, ಯುವಸಂಗಮ ವಾಣೀನಗರ ಹಾಗೂ ಮಾತೃಭೂಮಿ ಸ್ವರ್ಗ ಕ್ಲಬ್‍ಗಳು ಕೈಜೋಡಿಸಿತು.
ರಸ್ತೆಯ ಎರಡೂ ಬದಿ ಬೆಳೆದು ನಿಂತಿದ್ದ ಕುರುಚಲು ಕಾಡನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಬದಿಯ ಚರಂಡಿಯನ್ನೂ ಸ್ವಚ್ಛಗೊಳಿಸಲಾಯಿತು.
ಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ ಎಂ., ವಿ.ಎಸ್.ಎಸ್.ಅಧ್ಯಕ್ಷ ನರಸಿಂಹ ಪೂಜಾರಿ ಎಸ್.ಬಿ. ಹಾಗೂ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಆಫೀಸರ್ ಅಜಿನ್ ನೇತೃತ್ವ ನೀಡಿದರು.



