ಲಖನೌ: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳವು ಪ್ರಕರಣದಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯನ್ನಾಗಿ (ಸರ್ಕಾರಿ ಪಕ್ಷದ ಸಾಕ್ಷಿ) ಪರಿಗಣಿಸಲಾಗಿದೆ.
ಪ್ರಕರಣದ ಸಂಬಂಧ ಬುಧವಾರ ಫೈಜಾಬಾದ್‌ನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾ ಅವರ ಹೆಸರು ಉಲ್ಲೇಖ ಆಗಿರಲಿಲ್ಲ.
7000 ಪುಟಗಳ ಆರೋಪಪಟ್ಟಿಯಲ್ಲಿ ಎಂಟು ಆರೋಪಿಗಳ ಹೆಸರುಗಳಿದ್ದವು. ರಾಯ್ ಹೆಸರು ಇಲ್ಲದಿರುವುದಕ್ಕಾಗಿ ಪ್ರತಿಭಟಿಸಿದ್ದ ಸ್ಥಳೀಯ ವಕೀಲರು, ಆರೋಪಪಟ್ಟಿ ಪರಿಗಣಿಸುವ ಮುನ್ನ ನಮ್ಮ ಆಕ್ಷೇಪ ಆಲಿಸಬೇಕೆಂದು ಆಗ್ರಹಿಸಿದ್ದರು.
ಇದೀಗ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಚಂಪತ್ ರಾಯ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಗಳು ಎಂದು ಪರಿಗಣಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ಎಸ್‌ಐಟಿ ಕಳೆದ ತಿಂಗಳು ವರದಿ ಸಲ್ಲಿಸಿ, ಟ್ರಸ್ಟ್‌ನ ಎಂಟು ನೌಕರರನ್ನು ಆರೋಪಿಗಳೆಂದು ಹೇಳಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮತ್ತೊಂದು ಎಸ್‌ಐಟಿ ರಚನೆ ಮಾಡಲಾಗಿದೆ.

