HEALTH TIPS

ವಿದ್ಯಾರ್ಥಿಗಳ ಸುರಕ್ಷತೆಗಾಗಿ 'ಆತ್ಮಹತ್ಯೆ ತಡೆ ಕಂಬಿ' ಹೊಂದಿರುವ ಫ್ಯಾನ್ ಅಳವಡಿಕೆ

ರಾಂಚಿ: ವಿದ್ಯಾರ್ಥಿಗಳ ಸುರಕ್ಷತೆಗಾಗಿ, ಮೆಸ್ರಾದಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ತನ್ನ ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿರುವ ಸಾಂಪ್ರದಾಯಿಕ ಸೀಲಿಂಗ್ ಫ್ಯಾನ್‌ಗಳ ಬದಲಿಗೆ 'ಆತ್ಮಹತ್ಯೆ ತಡೆ ಕಂಬಿ' ಹೊಂದಿರುವ ಹೊಸ ಮಾದರಿಯ ಫ್ಯಾನ್‌ಗಳನ್ನು ಅಳವಡಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  


ಈ ಫ್ಯಾನ್‌ ಕಂಬಿಗಳ ಮೇಲಿನ ಭಾರ ಅಥವಾ ಒತ್ತಡವು ನಿಗದಿತ ಮಿತಿಗಿಂತ ಹೆಚ್ಚಾದರೆ, ಅದು ಸ್ವಯಂಚಾಲಿತವಾಗಿ ಕೆಳಗೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಆತ್ಮಹತ್ಯೆಯಂತಹ ಘಟನೆಗಳನ್ನು ತಡೆಯಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಮತ್ತು ದೇಶದ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಇತ್ತೀಚೆಗೆ ನಡೆದ ದುರಂತ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 19 ರಂದು, ಬಿಐಟಿ ಮೆಸ್ರಾದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ವಿದ್ಯಾರ್ಥಿಗಳ ಸುರಕ್ಷತೆ, ಕ್ಷೇಮಾಭಿವೃದ್ಧಿಯ ಮತ್ತು ಅವರ ಮೇಲೆ ನಿರಂತರ ಗಮನವನ್ನು ನೀಡುವ ಉದ್ದೇಶದಿಂದ ಮುನ್ನೆಚ್ಚರಿಕಾ ಸುರಕ್ಷತಾ ಕ್ರಮವಾಗಿ, ಬಿಐಟಿ ಮೆಸ್ರಾದ ಹಾಸ್ಟೆಲ್ ಕೊಠಡಿಗಳಲ್ಲಿ 'ಆತ್ಮಹತ್ಯೆ ತಡೆ ಕಂಬಿ' ಹೊಂದಿರುವ ಹೊಸ ಮಾದರಿಯ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಥಮ ವರ್ಷದ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಂದ ಪ್ರಾರಂಭಿಸಿ, ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಎಲ್ಲಾ 14 ಹಾಸ್ಟೆಲ್‌ಗಳಲ್ಲಿ ಹಂತ ಹಂತವಾಗಿ ಈ ಫ್ಯಾನ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries