ಕಾಸರಗೋಡು: ಹೋಟೆಲಲ್ಲಿ ನೀಡಿದ್ದ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎಡನೀರು ಕಳರಿ ಹೌಸ್‍ನ ಅಭಿಜಿತ್ ಕೆ (23)ನೀಡಿದ ದೂರಿನನ್ವಯ ಹೋಟೆಲ್ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಈ ಕೇಸು. ನಾಲ್ವರು ಸ್ನೇಹಿತರೊಂದಿಗೆ ಚೆಂಗಳ ಸಿಟಿಜನ್ ನಗರದ ಹೋಟೆಲೊಂದಕ್ಕೆ ತೆರಳಿದ್ದು, ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ಮಾಲಿಕ ಸೇರಿದಂತೆ ನಾಲ್ಕು ಮಂದಿ ಕಬ್ಬಿಣದ ಸಲಾಕೆಯಿಂದ ಥಳಿಸಿ ಗಾಯಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

