ಮಂಜೇಶ್ವರ: ಇಂಟರ್‍ಲಾಕ್ ಬ್ರಿಕ್ಸ್ ನಿರ್ಮಿಸುವ ಸಂಸ್ಥೆಗೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ಸಾಮಗ್ರಿಗಳನ್ನು ಕಳವು ನಡೆಸಿದ್ದಾರೆ. ಬಡಾಜೆ ಪಾಪಿಲದಲ್ಲಿ ಚಟುವಟಿಕೆ ನಡೆಸುತ್ತಿರುವ ಇಂಟರ್ ಲಾಕಿಂಗ್ ಕಾಂಕ್ರೀಟ್ ಬ್ರಿಕ್ಸ್ ಎಂಬ ಹೆಸರಿನ ಸಂಸ್ಥೆಯಿಂದ ಕಳವು ನಡೆದಿದೆ.
ಸೆಪ್ಟೆಂಬರ್ 11ರಿಂದ 22ರ ಮಧ್ಯೆ ಕಳ್ಳರು ಸಂಸ್ಥೆಗೆ ನುಗ್ಗಿ ಇಂಟರ್ ಲಾಕ್ ಬ್ರಿಕ್ಸ್ ತಯಾರಿ ಯಂತ್ರದ ಎರಡು 5 ಎಚ್‍ಪಿ ಮೋಟಾರ್‍ಗಳು, ಎರಡು ಅಚ್ಚುಗಳು, ಸೀಲಿಂಗ್ ಫ್ಯಾನ್, ಗ್ಯಾಸ್ ಸಿಲಿಂಡರ್ ಹಾಗೂ ಇಲೆಕ್ಟ್ರಿಕಲ್ ವೈರ್‍ಗಳನ್ನು ನಾಶಗೊಳಿಸಿ ಅದರೊಳಗಿದ್ದ ತಾಮ್ರದ ತಂತಿಗಳನ್ನು ತೆಗೆದು ಸಾಗಿಸಿದ್ದಾರೆ. ಇದರಿಂದ 4,30,000 ರೂಪಾಯಿಗಳ ನಷ್ಟವುಂಟಾಗಿದೆ ಎಂದು ಸಂಸ್ಥೆಯ ಮಾಲಕ ಕುಂಜತ್ತೂರು ಕೆಎಚ್‍ಎಂ ಅಪಾರ್ಟ್‍ಮೆಂಟ್ ಬಳಿಯ ಅಸ್ನಾಫ್ ಮಂಜಿಲ್ ನಿವಾಸಿ ಅಶ್ರಫ್ ಕೆ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಪೆÇಲೀಸರು ಪರಿಶೀಲಿಸುತ್ತಿದ್ದಾರೆ.

