ಮಂಜೇಶ್ವರ: ಪತ್ವಾಡಿ ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಠಾಣೆ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಪೆÇಲೀಸ್ ಕಾರ್ಯಾಚರಣೆ ವೇಳೆ ಚಾಲಕ ಲಾರಿಯನ್ನು ಉಪೇಕ್ಷಿಸಿ ಚಾಲಕ ಪರಾರಿಯಾಗಿದ್ದಾನೆ. ಎಸ್‍ಐ ಶಬರಿಕೃಷ್ಣನ್ ಉಪ್ಪಳ ಮಜಲ್‍ನಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಮರಳು ಹೇರಿದ ಲಾರಿ ಆಗಮಿಸಿದ್ದು, ಲಾರಿ ನಿಲ್ಲಿಸುವಂತೆ ಪೆÇಲೀಸರು ಸೂಚಿಸಿದಾಗ ಚಾಲಕ ಲಾರಿಯನ್ನು ರಸ್ತೆಅಂಚಿಗೆ ನಿಲ್ಲಿಸಿ, ಇಳಿದು ಪರಾರಿಯಾಗಿದ್ದಾನೆ. ಲಾರಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರರು ಕೇಸು ದಾಖಲಿಸಿಕೊಂಡಿದ್ದಾರೆ.

