HEALTH TIPS

ಹೊಸಂಗಡಿ: ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲೆತ್ನ: ತಮಿಳುನಾಡು ನಿವಾಸಿ ಮಹಿಳೆ ಸೆರೆ

ಮಂಜೇಶ್ವರ: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ 3 ಪವನ್ ಚಿನ್ನದ ಸರವನ್ನು ಕಳವುಗೈಯ್ಯಲು ಪ್ರಯತ್ನಿಸಿದ ತಮಿಳು ನಾಡು ನಿವಾಸಿ ಮಹಿಳೆ ಸೆರೆಗೀಡಾಗಿದ್ದಾಳೆ. ಮಧುರೈ ನಿವಾಸಿ ಮುತ್ತಾತ (40) ಎಂಬಾಕೆಯನ್ನು  ಕಳವು ಯತ್ನ ವೇಳೆ ನಾಗರಿಕರು ಸೆರೆಹಿಡಿದು ಪೆÇಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ  ಘಟನೆ ನಡೆದಿದೆ. ಬಂಗ್ರಮಂಜೇಶ್ವರ ನಿವಾಸಿ ಪ್ರೇಮ 77) ಎಂಬವರ  ಕುತ್ತಿಗೆಯಿಂದ 3 ಪವನ್‍ನ ಚಿನ್ನದ ಸರವನ್ನು ಕಸಿಯಲು ಪ್ರಯತ್ನಿಸಿದ್ದಳು. 

ಸಂಬಂಧಿಕರ ಮದುವೆ  ಅತಿಥಿ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿನಿಂದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಹೊಸಂಗಡಿಗೆ ಪ್ರೇಮ ಬರುತ್ತಿದ್ದರು. ಬಸ್ ಇಳಿಯುತ್ತಿದ್ದಂತೆ ಅವರ ಹಿಂಬದಿಯಲ್ಲಿ ಚೂಡಿದಾರ ಧರಿಸಿದ ಮಹಿಳೆ  ಚಿನ್ನದ ಸರವನ್ನು ಎಗರಿಸಲು ಯತ್ನಿಸಿದ್ದಾಳೆ.  ಇದನ್ನು ಕಂಡ ಇನ್ನೋರ್ವೆ ಯುವತಿ  ಪ್ರೇಮರಿಗೆ  ವಿಷಯ ತಿಳಿಸಿದ್ದರು.  ಆವಾಗಲೇ ಸರ ಕಸಿಯಲು ನಡೆಸಿದ ಯತ್ನ ಗಮನಕ್ಕೆ ಬಂದಿದೆ.  ವಿಷಯ ತಿಳಿದ ಪ್ರಯಾಣಿಕರ ಸಹಿತ ಇತರರು ಮಹಿಳೆಯನ್ನು ತಡೆದು ನಿಲ್ಲಿಸಿ ಮಂಜೇಶ್ವರ ಪೆÇಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮಹಿಳೆ ವಿರುದ್ಧ ಹಲವು ಕಳವು ಪ್ರಕರಣಗಳು  ದಾಖಲಾಗಿವೆಯೆಂದು ಪೋಲೀಸರು ತಿಳಿಸಿದ್ದಾರೆ. ಸೆರೆಗೀಡಾದ ಮಹಿಳೆಯನ್ನು ಪೋಲೀಸರು ತನಿಖೆಗೊಳಪಡಿಸುತ್ತಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries