HEALTH TIPS

ಯುವತಿಗೆ ದೈಹಿಕ ಕಿರುಕುಳ: ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ:  ಯುವತಿಗೆ ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಪತಿ ಸೇರಿದಂತೆ ನಾಲ್ವರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕಣ ದಾಖಲಿಸಿಕೊಂಡಿದ್ದಾರೆ.

ಕುಂಜತ್ತೂರು ಉದ್ಯಾವರ ಮಿಸ್ರಿಯಾ ಮಂಜಿಲ್‌ನ   ಮುಹಮ್ಮದ್ ಎಂಬವರ ಪುತ್ರಿ   ಅಮಿನತ್ತ್ ಇಶ್ವಾನ (24) ಎಂಬಾಕೆ ಈ ಬಗ್ಗೆ ದೂರು ನೀಡಿದ್ದು ಅದರಂತೆ ಆಕೆಯ ಪತಿ ಕುಂಜತ್ತೂರು ಪದವಿನ ಅಬ್ಬಾಸ್ ಅನಸ್, ಆಮಿನ, ಮುಹಮ್ಮದ್ ಮತ್ತು ಅಜೀಮ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

2025 ಜನವರಿ 19ರಂದು ಅಬ್ಬಾಸ್ ಅನಸ್‌ನೊಂದಿಗೆ ನನ್ನ ವಿವಾಹ ನಡೆಯಿತೆಂದೂ, ನಂತರದ ದಿನಗಳಲ್ಲಿ ಆತ ಮತ್ತು ಇತರ ಮೂವರು ಆರೋಪಿಗಳು ಸೇರಿ ನನಗೆ ದೈಹಿಕ ಕಿರುಕುಳ ನೀಡಲಾರಂಭಿಸಿದರೆಂದೂ,  ನನ್ನ 20 ಪವನ್‌ನ ಚಿನ್ನವನ್ನು ಪಡೆದು  ಅವರು ಹಿಂತಿರುಗಿಸಿಲ್ಲವೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಮಿನತ್ ಇಶ್ವಾನ ಆರೋಪಿಸಿದ್ದಾಳೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries