ಮುಂಬೈ (PTI): ರಾಷ್ಡ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯಿಂದ ಗುಜರಾತ್ಗೆ ಸ್ಥಳಾಂತರಿಸಿರುವ ನಿರ್ಧಾರಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿವೆ.
'ದೆಹಲಿಯು ರಾಷ್ಟ್ರ ರಾಜಧಾನಿ.ರಾಷ್ಟ್ರಮಟ್ಟದ ಸಮಾರಂಭವು ಅಲ್ಲಿಯೇ ನಡೆಯಬೇಕು.
ದೆಹಲಿ ಮತ್ತು ಮುಂಬೈ ನಗರಗಳ ಪ್ರಾಮುಖ್ಯವನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಕ್ರಿಕೆಟ್ ವಿಶ್ವಕಪ್ ಪಂದ್ಯಗಳು, ವಿದೇಶಿ ನಾಯಕರ ಭೇಟಿ ಸೇರಿ ಪ್ರಮುಖ ಕಾರ್ಯಕ್ರಮಗಳನ್ನು ಗುಜರಾತ್ಗೆ ಸ್ಥಳಾಂತರಿಸಲಾಗುತ್ತಿದೆ' ಎಂದು ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕೇಂದ್ರವು ಎಲ್ಲವನ್ನೂ ಗುಜರಾತ್ಗೆ ಕೊಂಡೊಯ್ಯಲು ಇಚ್ಛಿಸುತ್ತಿದೆ. ಇದು ಇಡೀ ದೇಶಕ್ಕೆ ಕೇಂದ್ರ ಸರ್ಕಾರವೇ ಅಥವಾ ಗುಜರಾತ್ಗೆ ಮಾತ್ರವೇ' ಎಂದು ಶಿವಸೇನಾ ನಾಯಕ (ಉದ್ಧವ್ ಬಣ) ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.

