ಕಾಸರಗೋಡು: "ಮಾಡಿದ ಕೆಲಸಕ್ಕೆ ವೇತನ ಪಾವತಿಸಿ" ಎಂಬ ಘೋಷಣೆಯೊಂದಿಗೆ, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ (ಕೆಯುಡಬ್ಲ್ಯೂಜೆ)ನ ಕಾಸರಗೋಡು ಜಿಲ್ಲಾ ಸಮಿತಿಯು 'ಮಾಧ್ಯಮಂ' ಪತ್ರಿಕೆಯ ಪ್ರತಿಭಟನಾ ನಿರತ ಉದ್ಯೋಗಿಗಳಿಗೆ ಬೆಂಬಲ ವ್ಯಕ್ತಪಡಿಸಿ ಸಭೆ ಆಯೋಜಿಸಿತು.
ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಕೆ. ರಾಜನ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿರಾಜ್ಯ ಉಪಾಧ್ಯಕ್ಷ ಕೆ.ವಿ. ಕೃಷ್ಣನ್, ಎಚ್‍ಎಂಎಸ್ ರಾಜ್ಯ ಉಪಾಧ್ಯಕ್ಷ ಪಿ.ವಿ. ತಂಬಾನ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ಟಿ.ಎ. ಶಾಫಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ಮತ್ತು ಎಚ್‍ಎಂಎಸ್ ಜಿಲ್ಲಾ ಅಧ್ಯಕ್ಷ ಕೆ. ಅಂಬಾಡಿ ಉಪಸ್ಥಿತರಿದ್ದರು. ಕೆ.ವಿ. ಪದ್ಮೇಶ್ ಸ್ವಾಗತಿಸಿದರು. ಅಬ್ದುಲ್ಲಕುಞÂ ಉದುಮ ವಂದಿಸಿದರು.


