ಉಪ್ಪಳ: ಬಾಯಾರು ಗ್ರಾಮದ ತಲೆಂಗಳ ನಿವಾಸಿ ದಿ. ಬಾಬು ಮಾಸ್ಟರ್ ಅವರ ಪತ್ನಿ ರೋಹಿಣಿ ತಲೆಂಗಳ (88)ಶನಿವಾರ ನಿಧನರಾದರು. ಮೃತರು ಪುಸ್ತಕ ಪ್ರೇಮಿಯಾಗಿದ್ದು, ವಾಚನಾಭಿರುಚಿ ಮೈಗೂಡಿಸಿಕೊಂಡವರಾಗಿದ್ದರು. ಭಗವದ್ಗೀತಾ ಪಾರಾಯಣ, ಭಜನೆಯಲ್ಲೂ ನಿರತರಾಗುವ ಮೂಲಕ ಕುಟುಂಬಕ್ಕೆ ಧಾರ್ಮಿಕ ಸಂಸ್ಕಾರದ ಧಾರೆ ಎರೆದಿದ್ದರು. ಅವರು ಪುತ್ರಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.


