ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ "ಭಾರ್ಗವ ವಿಜಯ" ಕಥಾಭಾಗದ ತಾಳಮದ್ದಳೆ ಜರಗಿತು.ಪಾತ್ರವರ್ಗದಲ್ಲಿ ರಾಜಾರಾಮ್ ರಾವ್ ಮೀಯಪದವು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ನಾರಾಯಣ ನಾವಡ ಮೂಡಂಬೈಲು, ಚಂದ್ರಕುಮಾರ್ ಬಲಿಪಗುಳಿ ಹಾಗೂ ಶಾರ್ವರಿ ನಾವಡ ಮೂಡಂಬೈಲು ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆ ಮತ್ತು ಮೃದಂಗದಲ್ಲಿ ಗಣಪತಿ ಭಟ್ ಪೆರ್ಲ ಹಾಗೂ ಸ್ಕಂದರಾಜ್ ಮಯ್ಯ ವರ್ಕಾಡಿ ಸಹಕರಿಸಿದರು.

.jpg)
