ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಬುಧವಾರ ನಡೆಯಿತು. ಬ್ಯಾಂಡು ವಾದ್ಯಗಳೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಪಿಟಿಎ ಅಧ್ಯಕ್ಷ ಮೋಹನ್. ಬಿ ಉದ್ಘಾಟಸಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಳಿಗೆ ಪೂರಕ ಎಂದು ನುಡಿದರು.
ಸ್ಕೌಟ್ ಮತ್ತು ಗೈಡ್ಸ್, ಜೂನಿಯರ್ ರೆಡ್ ಕ್ರಾಸ್, ಹಾಗು ಲಿಟ್ಲ್ ಕೈಟ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವಿದ್ಯಾರ್ಥಿನಿ, ರಾಜ್ಯ ಮಟ್ಟದ ಸ್ಪರ್ಧಿ ನಿರೀಕ್ಷಾ ಕ್ರೀಡಾಜ್ಯೋತಿಯನ್ನು
ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಎಂ. ಪಿ. ಟಿ. ಎ ಅಧ್ಯಕ್ಷೆ ಸೌಮ್ಯ ಕಳಿಯೂರ್ ಶುಭಹಾರೈಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಕ ಉದಯ ಶೆಟ್ಟಿ ಹಾಗೂ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಜಯಕುಮಾರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ವಂದಿಸಿದರು. ಕಿಶೋರ್ ನಿರೂಪಿಸಿದರು.

.jpg)
.jpg)
