ಕಾಸರಗೋಡು: ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಲಿರುವ 71 ನೇ ವರ್ಷದ ಸಾರ್ವಜನಿಕ. ಶ್ರೀ ಗಣೇಶೋತ್ಸವ ಅಂಗವಾಗಿ ಕಬಡ್ಡಿ ಪಂದ್ಯಾಟ ಆಯೋಜಿಸಲಾಯಿತು. ಹಿರಿಯ ಕ್ರೀಡಾ ಪಟುಗಳಾದ ಕಮಲಾಕ್ಷ ಹಾಗೂ ಕೃಷ್ಣ ನಾಯರ್ ಬೀರಂತಬೈಲ್ ಇವರು ದೀಪ ಪ್ರಜ್ವಲಿಸುವಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಆಕಾಶ ಪ್ರಮೋದ್, ಉಪಾಧ್ಯಕ್ಷ ರವಿ ಕೇಳುಗುಡ್ಡೆ, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಕಾರ್ಯದರ್ಶಿ ರವಿ ಕೇಸರಿ, ಗಣೇಶೋತ್ಸವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಕೆ.ಎನ್, ಉಮೇಶ್ ನೆಲ್ಲಿಕುಂಜೆ, ಹಿರಿಯ ಸದಸ್ಯರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅರುಣ್ ಕುಮಾರ್ ಶೆಟ್ಟಿ, ಕಬಡ್ಡಿ ತೀರ್ಪುಗಾರರಾದ ಗಣೇಶ್, ಗಣೇಶ್ ಕುಂಬಳೆ ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.

