HEALTH TIPS

ಅಮೆರಿಕ ಮಧ್ಯಂತರ ಚುನಾವಣೆ ಬೆನ್ನಲ್ಲೇ ಇರಾನ್ ಯುದ್ಧ ಅಂತ್ಯ: ಟ್ರಂಪ್ ಭವಿಷ್ಯ

ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಬೆನ್ನಲ್ಲೇ ಇರಾನ್ ಜೊತೆಗಿನ ಯುದ್ಧ ತಕ್ಷಣವೇ ಕೊನೆಗೊಳ್ಳಲಿದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇರಾನ್‌ಗೆ ಇನ್ನು ಮುಂದೆ ಯುದ್ಧ ಮುಂದುವರಿಸುವ ಶಕ್ತಿಯಿಲ್ಲ. 

ಹೀಗಾಗಿ ಚುನಾವಣೆ ಮುಗಿದ ತಕ್ಷಣವೇ ಯುದ್ಧ ಅಂತ್ಯಗೊಳ್ಳಲಿದೆ ಎಂಬ ನಂಬಿಕೆ ನನಗಿದೆ. ಅಮೆರಿಕದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಅದು (ಇರಾನ್) ತೀವ್ರ ಯತ್ನ ನಡೆಸುತ್ತಿದೆ' ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಟ್ರಂಪ್ ಅವರ ಉಳಿದ ಎರಡು ವರ್ಷಗಳ ಆಡಳಿತಾವಧಿಯಲ್ಲೂ ಈ ಯುದ್ಧ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರ ಹಿರಿಯ ಸಲಹೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು 'ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ಪರಮಾಣು ನಿಯಮ ಉಲ್ಲಂಘನೆ: ವಿಶ್ವಸಂಸ್ಥೆಗೆ ದೂರು

ಇರಾನ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ಬಿಗಿಗೊಳಿಸಲು ಅಮೆರಿಕ ಯತ್ನಿಸುತ್ತಿರುವ ಬೆನ್ನಲ್ಲೇ, 'ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ' (ಐಎಇಎ) ಇರಾನ್‌ಗೆ ಹೊಸ ರಾಜತಾಂತ್ರಿಕ ಸಂಕಷ್ಟ ತಂದೊಡ್ಡಿದೆ. ಪರಮಾಣು ಒಪ್ಪಂದ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಇರಾನ್‌ ವಿರುದ್ಧ ಕ್ರಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ'ಯನ್ನು (ಯುಎನ್‌ಎಸ್‌ಸಿ) ಉಲ್ಲೇಖಿಸಿ ನಿರ್ಣಯ ಅಂಗೀಕರಿಸಲಾಗಿದೆ.

ಈ ನಿರ್ಣಯದ ಪರವಾಗಿ 23 ಸದಸ್ಯ ದೇಶಗಳು ಮತ ಚಲಾಯಿಸಿದರೆ, 8 ದೇಶಗಳು ಮತದಾನದಿಂದ ದೂರ ಉಳಿದವು. ರಷ್ಯಾ, ಚೀನಾ ಮತ್ತು ನೈಜರ್ ದೇಶಗಳು ನಿರ್ಣಯದ ವಿರುದ್ಧವಾಗಿ (ಇರಾನ್ ಪರವಾಗಿ) ಮತ ಚಲಾಯಿಸಿದವು.

ಅಮೆರಿಕದ ಒತ್ತಡಕ್ಕೆ ಮಣಿದು ಈ ನಿರ್ಣಯ ಅಂಗೀಕರಿಸಲಾಗಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಇರಾನ್ ಕಿಡಿಕಾರಿದೆ.

ತೈಲ ಟ್ಯಾಂಕರ್‌ಗಳ ಮೇಲೆ ದಾಳಿ: ಮಂಗಳವಾರವಷ್ಟೇ ಅಮೆರಿಕ ಸೇನೆಯು ಇರಾನ್‌ನ ಐದು ತೈಲ ಟ್ಯಾಂಕರ್‌ಗಳನ್ನು ಹೊಡೆದುರುಳಿಸಿತ್ತು. ಸಮರ ನೌಕೆಗಳ ಮೇಲೆ ದಾಳಿಗೆ ಯತ್ನಿಸಿದರೆ ಇನ್ನಷ್ಟು ಹಡಗುಗಳನ್ನು ಧ್ವಂಸಗೊಳಿಸುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಎಚ್ಚರಿಸಿದ್ದಾರೆ.

ಇರಾನ್ ಆಡಳಿತ ಪತನಕ್ಕೆ ನೆತನ್ಯಾಹು ಕರೆ: 'ಇರಾನ್‌ನ ಉಗ್ರಗಾಮಿ ಆಡಳಿತವನ್ನು ಪತನಗೊಳಿಸುವುದೇ ನಮ್ಮ ಮುಖ್ಯ ಗುರಿ, ನಾವು ಆ ಗುರಿಯ ತೀರಾ ಹತ್ತಿರದಲ್ಲಿದ್ದೇವೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಬೆದರಿಕೆ ನಿಲ್ಲಿಸಿ, ಬೇಡಿಕೆಗಳಿಗೆ ಒಪ್ಪಿ: 'ಇರಾನ್‌ಗೆ ಬೆದರಿಕೆ ಹಾಕುವುದನ್ನು ಮೊದಲು ನಿಲ್ಲಿಸಿ, ಪರಮಾಣು ಕಾರ್ಯಕ್ರಮ ಸೇರಿದಂತೆ ತನ್ನ ಷರತ್ತುಗಳಿಗೆ ಅಮೆರಿಕ ಒಪ್ಪಿಗೆ ಸೂಚಿಸಿದರೆ ಯುದ್ಧ ಕೊನೆಗೊಳ್ಳಬಹುದು' ಎಂದು ಇರಾನ್‌ನ ಐಆರ್‌ಜಿಸಿ ಬುಧವಾರ ಹೇಳಿದೆ. ಅಲ್ಲದೆ ಇಸ್ರೇಲ್‌ ಸೇನೆಯು ಲೆಬನಾನ್‌ನಿಂದ ಹಿಂದಕ್ಕೆ ಹೋಗಬೇಕು. ಯೆಮನ್‌ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸಬೇಕು ಎಂದು ಅದು ಆಗ್ರಹಿಸಿದೆ.

ಯುದ್ಧ ಪ್ರಾರಂಭವಾದಗಿನಿಂದ (ಫೆಬ್ರುವರಿ 28) ಇರಾನ್‌ ಪಡೆಗಳು ಹೊರ್ಮುಜ್‌ ಜಲಸಂಧಿ ಮೂಲಕ ಸಂಚಾರವನ್ನು ನಿರ್ಬಂಧಿಸಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನಿನ ಬಂದರುಗಳ ಮೇಲೆ ಪ್ರತಿ ದಿಗ್ಬಂಧನ ಹೇರಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries