ಕಾಸರಗೋಡು: ಕಣಜದ ಹುಳುವಿನ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಳಿಪರಂಬ ತಲೋರ ಅಂಗನವಾಡಿ ಸಮೀಪ ವಾಸಿಸುತ್ತಿದ್ದ ತುಂಡಿ ವಳಪ್ಪಿಲ್ ಗೋಕುಲ ದಾಸ್ (47)ಸೋಮವಾರ ಮೃತಪಟ್ಟಿದ್ದಾರೆ. ತೆಂಗಿನಮರ ಏರುವ ಕಾರ್ಮಿಕರಾಗಿದ್ದ ಗೋಕುಲ್‍ದಾಸ್ ಅವರಿಗೆ ಆಗಸ್ಟ್ 29ರಂದು ಕಣಜದ ಹುಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಳಿಪರಂಬ ಪಯ್ಯಕುಳಂಗರ ಎಂಬಲ್ಲಿ ಕಾಪಾಲಿಕುಳಂಗರ ದೇವಸ್ಥಾನ ಸನಿಹದ ನಿವಾಸಿ, ಗೋಪಾಲನ್ ಅವರ ಮನೆಯಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿದ್ದ ಕಣಜಗಳು ಕಚ್ಚಿದ್ದು, ತಕ್ಷಣ ಇವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.


