HEALTH TIPS

ಮನೆ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಮೃತ್ಯು

ಕಾಸರಗೋಡು: ಹಳೆ ಮನೆಯನ್ನು ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ ಕೂಡ್ಲು ಬಳಿ ನಡೆದಿದೆ. ಮೂಲತಃ ಪಾಲಕ್ಕಾಡ್ ಕೊಲ್ಲಂಕೋಡ್ ಪಯಲೂರ್ ಮುಖ್ ತೆಕತ್ತರ ನಿವಾಸಿ ಹಾಗೂ ಈಗ ಪೆರಿಯದ ಕುಣಿಯಾದಲ್ಲಿ ವಾಸಿಸುತ್ತಿರುವ ವಿ.ವಿ. ವಿಶಾಖ್ ಚಂದ್ರ (35) ಸಾವನ್ನಪ್ಪಿದ ದುರ್ದೈವಿ.

ಕೂಡ್ಲು ಭಗವತಿನಗರದಲ್ಲಿರುವ ಸಂಬಂಧಿಕರೊಬ್ಬರ ಹಳೆ ಮನೆಯನ್ನು ವಿಶಾಖ್ ಸೇರಿ ಇತರ ಕಾರ್ಮಿಕರು ನಿನ್ನೆ ಮಧ್ಯಾಹ್ನ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ವಿಶಾಖ್‌ರ ದೇಹದ ಮೇಲೆ ಕುಸಿದು ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಇತರ ಕಾರ್ಮಿಕರು ಹಾಗೂ ಊರವರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮರದ ಕೆಲಸ ಕಾರ್ಮಿಕನಾಗಿರುವ ವಿಶಾಖ್ ಕಳೆದ ೧೦ ವರ್ಷಗಳಿಂದ ಕುಣಿಯಾದಲ್ಲಿ ವಾಸಿಸುತ್ತಿದ್ದಾರೆ. ಅವಿವಾಹಿತರಾಗಿರುವ ಇವರು ತಂದೆ ವಿನಯಚಂದ್ರ- ತಾಯಿ ವಿದ್ಯಾ, ಸಹೋದರಿಯರಾದ ವಿಶ್ವತಿ,  ವಿಜಿಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆಗೊಳಪಡಿಸಿದ ನತರ ಮನೆಯವರಿಗೆ ಬಿಟ್ಟುಕೊಡಲಾಯಿತು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries