HEALTH TIPS

ಉದ್ಯೋಗಖಾತ್ರಿ ಯೋಜನೆ ತಕ್ಷಣ ಮುಂದುವರಿಸಬೇಕು- ಬಿಎಂಎಸ್

ಕಾಸರಗೋಡು: ಉದ್ಯೋಗ ಖಾತ್ರಿ ಯೋಜನೆ ವಿರುದ್ಧ ಸುಳ್ಳು ಪ್ರಚಾರ ನಡೆಸಿ ಕಾರ್ಮಿಕರಲ್ಲಿ ತಪ್ಪು ಭಾವನೆ ಮೂಡಿಸುವ ಕೇರಳ ಸರ್ಕಾರದ ವಿರುದ್ಧ ಜಿಲ್ಲಾ 'ಉದ್ಯೋಗ ಖಾತ್ರಿ ಮಜ್ದೂರ್ ಸಂಘ್ (ಬಿಎಂಎಸ್)' ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿತು. 

ಉದ್ಯೋಗ ಖಾತರಿ ಯೋಜನೆ ಶೀಘ್ರವೇ ಆರಂಭಿಸಬೇಕೆಂದು, ಕೇಂದ್ರ ಸರ್ಕಾರ ನಿಗದಿಪಡಿಸಿದ 125 ಉದ್ಯೋಗ ದಿನಗಳನ್ನು ಖಚಿತಪಡಿಸಬೇಕೆಂದು ಸರ್ಕಾರದೊಂದಿಗೆ ಆಗ್ರಹಿಸಿದ್ದಾರೆ. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಉದ್ಯೋಗ ಖಾತ್ರಿ ಮಜ್ದೂರ್ ಸಂಘ್ ಜಿಲ್ಲಾ ಅಧ್ಯಕ್ಷ ಹರೀಶ್ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಕೇಳೋತ್, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಪಿ. ದಿನೇಶ್ ಬಂಬ್ರಾಣಿ, ಗುರುದಾಸ್ ಚೇನಕ್ಕೋಡು, ಯಶ್ವಂತ್ ಬೆಜ್ಜು, ಶ್ರೀಧರನ್ ಚೇನಕ್ಕೋಡು, ಕುಞÂ ಕಣ್ಣನ್ ಆರಯಾಲಿಂಗಲ್, ರಂಜಿತ್ ಚೆರ್ಕಳ, ಮನೋಜ್ ಜೆ.ಪಿ.ನಗರ್, ಗಣೇಶ್ ಮಣ್ಣಿಪ್ಪಾಡಿ, ಉಮಾ ಕಸಬಾ ಕಡಪ್ಪುರ, ಭವ್ಯಾ ಗುರುದಾಸ್, ಅರುಂಧತಿ ಕಸಬಾ ಕಡಪ್ಪುರಂ, ಶಾಂತ ಕುಮಾರಿ, ಸದಾಶಿವ ಮೊಗ್ರಾಲ್, ಜಿಲ್ಲಾ ಕಾರ್ಯದರ್ಶಿ ಮಿನಿ ಶ್ರೀನಿವಾಸನ್, ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries