ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯ ಹಿರಿಯ ಸಹೋದರನನ್ನು ಕಾರಿನಲ್ಲಿ ಕರೆದೊಯ್ದು ಕ್ರೂರವಾಗಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಪೆÇಲೀಸ್ ಠಾಣೆ ಪ್ರಿನ್ಸಿಪಲ್ ಎಸ್‍ಐ ಸೇರಿದಂತೆ ಮೂರು ಮಂದಿ ಪೆÇಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಬೇಕಲ ಠಾಣೆ ಪ್ರಿನ್ಸಿಪಲ್ ಎಸ್‍ಐ ಕೆ.ಪಿ. ಶರತ್, ಶೂರನಾಡ್ ಠಾಣೆಯ ಗ್ರೇಡ್ ಎಸ್‍ಐ ಆರ್. ಶ್ರೀಕುಮಾರ್, ಶಾಸ್ತಾಂಕೋಟ ಠಾಣೆಯ ಸಿಪಿಒ ವಿಪಿನ್ ಕುಮಾರ್ ಅಮಾನತುಗೊಂಡವರು.
2026ರ ಮೇ 29ರಂದು ಘಟನೆ ನಡೆದಿದ್ದು, ಪೆÇೀಕ್ಸೋ ಪ್ರಕರಣದಲ್ಲಿ ಆರೋಪಿಯಾದ ಕಿರಿಯ ಸಹೋದರನನ್ನು ಹುಡುಕಾಡಿ ಶಾಸ್ತಾಂಕೋಟ ಠಾಣೆಯ ಪೆÇಲೀಸರು ಅಡೂರಿಗೆ ತಲುಪಿದ್ದರು. ಆರೋಪಿಯನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಹಿರಿಯ ಸಹೋದರನನ್ನು ತಾವು ಆಗಮಿಸಿದ್ದ ಖಾಸಗಿ ವಾಹನಕ್ಕೇರಿಸಿಕೊಂಡು, ವಿವಿಧೆಡೆ ಸುತ್ತಾಡಿಸಿ, ಹಲ್ಲೆಗೈದಿರುವುದಾಗಿ ದೂರಲಾಗಿತ್ತು. ಈ ನಿಟ್ಟಿನಲ್ಲಿ ನಡೆಸಿದ ತನಿಖೆಯಲ್ಲಿ ಪೆÇಲೀಸರ ಲೋಪ ಪತ್ತೆಹಚ್ಚಲಾಗಿದ್ದು, ಪೋಲೀಸರ ವಿರುದ್ಧ ಕ್ರಮಕ್ಕಾಗಿ ಪತ್ತನಂತಿಟ್ಟ ಎಸ್‍ಪಿ ಐಜಿಗೆ ವರದಿ ನೀಡಿದ್ದರು.

