ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಮಾಂಜಟ್ಟಿಯ ಶಂಕರನಲ್ಲೂರು ನಿವಾಸಿ ಕೆ. ರಜೀಶ್ (45) ಎಂಬಾತನನ್ನು ಕಾಸರಗೋಡು ರೈಲ್ವೆ ಪೆÇಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ಸಂಚರಿಸುತ್ತಿದ್ದ ಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಆರೋಪಿ ಕಿರುಕುಳ ನೀಡಿದ್ದಾನೆ. ವೈದ್ಯರನ್ನು ಕಾಣಲು ಯುವತಿ ವಡಗರದಿಂದ ಸ್ನೇಹಿತೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದಳು.
ರೈಲು ಚೆರ್ವತ್ತೂರಿನಿಂದ ಹೊರಟು ಮುಂದೆ ಸಾಗುತ್ತಿದ್ದ ಸಂದರ್ಭ ಹಲವು ಬಾರಿ ಕಿರುಕುಳ ನೀಡಿದ್ದು, ಈ ಸಂದರ್ಭ ಯುವತಿ ಕಿರುಚಾಡಿದ್ದಾಳೆ. ಈ ಸಂದರ್ಭ ಇತರ ಪ್ರಯಾಣಿಕರು ಆಗಮಿಸಿ, ಆರೋಪಿಯನ್ನು ತಡೆದು ನಿಲ್ಲಿಸಿ ಕಾಸರಗೋಡು ರೈಲ್ವೆ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ರೈಲು ಕಾಸರಗೋಡಿಗೆ ತಲುಪಿದಾಗ ಎಸ್‍ಐ ಕೆ. ರಾಜೀವನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


