HEALTH TIPS

ಮಂಜೇಶ್ವರ ಉದ್ಯಾವರದಲ್ಲಿ ಸರಣಿ ಕಳವು-ಜನರಲ್ ಸ್ಟೋರ್‍ನಿಂದ 3000 ರೂ. ನಗದು, ಸಿಗರೇಟ್ ಕಳವು

ಮಂಜೇಶ್ವರ: ಮಂಜೇಶ್ವರದ ಉದ್ಯಾವರ ಆಸುಪಾಸು ಅಂಗಡಿಗಳಿಂದ ಸರಣಿ ಕಳವು ನಡೆದಿದೆ. ಉದ್ಯಾವರ ಬಿ.ಎಸ್ ನಗರದಲ್ಲಿರುವ ತುಕರಾಮ್ ಎಂಬವರ ಜನರಲ್ ಸ್ಟೋರ್‍ನ ಶಟರ್ ಮುರಿದು ಒಳನುಗ್ಗಿದ ಕಳ್ಳರು ಡ್ರಾಯರ್‍ನಲ್ಲಿರಿಸಿದ 3 ಸಾವಿರ ರೂ. ನಗದು ಮತ್ತು ಬೆಲೆಬಾಳುವ ಸಿಗರೇಟ್‍ಗಳನ್ನು ಕಳವುಗೈದಿದ್ದಾರೆ. ಅಲ್ಲದೆ ಸನಿಹದ ಯುನೈಟೆಡ್ ಬಿ.ಎಸ್ ಕ್ಲಬ್, ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಸಾಧಿಕ್ ಎಂಬವರ ರೇಡಿಯೇಟರ್ ರಿಪೇರಿ ಅಂಗಡಿ ಹಾಗೂ ಮೋಣು ಎಂಬವರ ಹಣ್ಣಿನ ಅಂಗಡಿಗಳಲ್ಲೂ ಕಳವಿಗೆ ಯತ್ನ ನಡೆದಿದೆ. ಇಲ್ಲಿ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ.

ಈ ಮೂರೂ ಅಂಗಡಿಗಳಿಂದ ಯಾವುದೇ ನಗದು ಹಾಗೂ ಬೆಲೆ ಬಾಳುವ ವಸ್ತುಗಳು ಕಳ್ಳರಿಗೆ ಸಿಗಲಿಲ್ಲ.  ಬೆಳಗ್ಗೆ ಅಂಗಡಿಗೆ ತಲುಪಿದಾಗಲೇ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries