HEALTH TIPS

ರಾಷ್ಟ್ರಕವಿ ಜಿ.ಎಸ್.ಎಸ್. ಜನ್ಮಶತಮಾನೋತ್ಸವ: ಉಭಯ ಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ

ಪೆರ್ಲ: ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ "ಡಾ. ಜಿ. ಎಸ್. ಶಿವರುದ್ರಪ್ಪ ಅವರ ಸಾಹಿತ್ಯದ ನೆಲೆಗಳು" ಕುರಿತು ಕನ್ನಡ-ಮಲಯಾಳಂ ಉಭಯ ಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ ನಾಲಂದಾ ಕಾಲೇಜಿನಲ್ಲಿ  ಯಶಸ್ವಿಯಾಗಿ ಜರಗಿತು.


ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅನಘ ಮತ್ತು ತಂಡದವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ದಿಶಾ ಉಪನ್ಯಾಸಕರು ಕನ್ನಡ ವಿಭಾಗ ಅವರು ಅತಿಥಿಗಳನ್ನು ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವ ಮೂಲಕ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಹಿ ಚಿ ಬೋರಲಿಂಗಯ್ಯ, ಅಧ್ಯಕ್ಷರು , ಕನ್ನಡ ಜಾನಪದ ಪರಿಷತ್ತು ಹಾಗೂ ಮಾಜಿ ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ. ಅವರು ಉದ್ಘಾಟನಾ ನುಡಿಗಳನ್ನಾಡಿ, "ಜಿ.ಎಸ್. ಶಿವರುದ್ರಪ್ಪ ಅವರು ಕೇವಲ ಕವಿಯಲ್ಲ, ಒಂದು ಸಾಂಸ್ಕøತಿಕ ಚಳುವಳಿ. ಅವರ ಕಾವ್ಯದಲ್ಲಿ ಮಣ್ಣಿನ ಸೊಗಡು, ಮಾನವೀಯ ಮೌಲ್ಯ ಮತ್ತು ಜೀವನದ ತಾತ್ವಿಕತೆ ಅಡಗಿದೆ. ಕಾರ್ತಿಕದ ದೀಪದಂತೆ ಅವರ ಸಾಹಿತ್ಯ ಸರ್ವಕಾಲಕ್ಕೂ ಬೆಳಗುತ್ತದೆ" ಎಂದು ಬಣ್ಣಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಿದ್ಧ ದ್ವಿಭಾಷಾ ವಿದ್ವಾಂಸೆ ರೇಣುಕಾ ಸುಧೀರ್ ಅರಸಿನಮಕ್ಕಿ ಅವರು ಮಲಯಾಳಂ ಭಾಷೆಯಲ್ಲಿ ಮಾತನಾಡಿ, ಜಿ.ಎಸ್.ಎಸ್. ಅವರ ಬಾಲ್ಯ, ವಿದ್ಯಾಭ್ಯಾಸ, ಸಾಹಿತ್ಯ ಕೃಷಿ, 'ಸಾಮಗ್ರ ಸಾಹಿತ್ಯ ಚರಿತ್ರೆ'ಯಂತಹ ಮೇರುಕೃತಿಗಳು ಹಾಗೂ ಅವರಿಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಬಿರುದು ಸೇರಿದಂತೆ ಹಲವು ಗೌರವಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕನ್ನಡ-ಮಲಯಾಳಂ ಸಾಹಿತ್ಯ ಸೇತುವೆಗೆ ಜಿ.ಎಸ್.ಎಸ್. ಅವರ ಕೊಡುಗೆ ಮಹತ್ವದ್ದು ಎಂದು ಅವರು ಅಭಿಪ್ರಾಯಪಟ್ಟರು. 

ಉದ್ಘಾಟನಾ ಕಾರ್ಯಕ್ರಮದಲ್ಲಿ  ಡಾ. ಸಾಸ್ವೇಹಳ್ಳಿ ಸತೀಶ್ ಸದಸ್ಯರು, ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡಿನ ಹಿರಿಯ ಕವಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ ಇವರು ಅತಿಥಿಗಳಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ ಮೋಹನ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮೋಹನ್ ಕುಮಾರ್ ಕೊಂಡಜ್ಜಿ, ಅಧ್ಯಕ್ಷರು , ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಪ್ರತಿಷ್ಠಾನ , ಬೆಂಗಳೂರು , ಆರ್ . ಚಂದ್ರಶೇಖರ ಸದಸ್ಯ ಕಾರ್ಯದರ್ಶಿ, ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು, ನಾಲಂದ ವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಶಶಿಭೂಷಣ ಶಾಸ್ತ್ರಿ ಸರವು ಉಪಸ್ಥಿತರಿದ್ದರು. 

ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳು ಜರುಗಿದವು. ಮೊದಲ ಗೋಷ್ಠಿಯಲ್ಲಿ ಜಿ.ಎಸ್.ಎಸ್. ಕಾವ್ಯದಲ್ಲಿನ ನಿಸರ್ಗ ಪ್ರೇಮ, ಪ್ರಣಯ ಮತ್ತು ಅಧ್ಯಾತ್ಮ ಚಿಂತನೆಗಳ ಕುರಿತು, ಎರಡನೇ ಗೋಷ್ಠಿಯಲ್ಲಿ ಅವರ ವಿಮರ್ಶಾ ದೃಷ್ಟಿಕೋನ ಮತ್ತು ಸಂಶೋಧನಾ ನೆಲೆಗಟ್ಟುಗಳ ಕುರಿತು ವಿದ್ವಾಂಸರು ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು, ಕಾಲೇಜಿನ  ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು, ಊರ-  ಪರಊರ ಕವಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಶ್ರೇಯಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾವ ಕಾವ್ಯ ಗಾಯನ ಎಲ್ಲಾ ಪ್ರೇಕ್ಷಕರ ಮನಸೂರೆಗೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries