HEALTH TIPS

ಕೊಚ್ಚಿಯಲ್ಲಿ ಬಹುಭಾಷಾ ಕವಿಗೋಷ್ಠಿ: ಗಡಿ ದಾಟಿದ ಭಾವೈಕ್ಯತೆಯ ಸಂಭ್ರಮ

ಕುಂಬಳೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‍ನಲ್ಲಿ 'ಕೇರಳ ಕರ್ನಾಟಕ ಜಾನಪದ ಉತ್ಸವ', ಪದಾಧಿಕಾರಿಗಳ ಪದಗ್ರಹಣ ಹಾಗೂ ಕೃತಿ ಬಿಡುಗಡೆ ಸಂಭ್ರಮದೊಂದಿಗೆ ಬಹುಭಾಷಾ ಕವಿಗೋಷ್ಠಿ ವಿಶಿಷ್ಟವಾಗಿ ಜರಗಿತು.


ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಕವಯತ್ರಿ ಲಕ್ಷ್ಮಿ ಕೆ. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದ ಅವರು, "ಭಾಷೆಗಳು ಮನುಷ್ಯರ ನಡುವೆ ಗೋಡೆ ಕಟ್ಟುವ ಬದಲು ಭಾವನೆಗಳ ಸೇತುವೆಯಾಗಬೇಕು. ವೈವಿಧ್ಯತೆಯೇ ನಮ್ಮ ಬಲವಾಗಿದ್ದು, ಬೇರೆ ಬೇರೆ ಭಾಷೆಗಳ ಮೂಲಕ ಹೊರಹೊಮ್ಮುವ ಕಾವ್ಯ ಗಡಿಗಳನ್ನು ಮೀರಿ ಜನಮನವನ್ನು ಬೆಸೆಯುವ ಅಪೂರ್ವ ಶಕ್ತಿ ಹೊಂದಿದೆ. ಗಡಿನಾಡಿನಲ್ಲಿ ಇಂತಹ ಸಾಹಿತ್ಯಿಕ, ಸಾಂಸ್ಕøತಿಕ ಸಮ್ಮಿಲನಗಳು ನಿರಂತರವಾಗಿ ನಡೆಯುವುದು ಪರಸ್ಪರ ಸೌಹಾರ್ದತೆ ಮತ್ತು ಭಾಷಾ ಪ್ರೇಮವನ್ನು ಹೆಚ್ಚಿಸಲು ಅನಿವಾರ್ಯ" ಎಂದು ನುಡಿದರು.

ಗೋಷ್ಠಿಯಲ್ಲಿ ವನಜಾಕ್ಷಿ ಚೆಂಬ್ರಕಾನ (ಕನ್ನಡ), ಡಾ. ಆಶಲತಾ ಚೇವಾರು (ತುಳು), ಉದಿನೂರು ಮೊಹಮ್ಮದ್ ಕುಂuಟಿಜeಜಿiಟಿeಜ (ಮಲೆಯಾಳಂ), ವಿಜಯ ಕಾನ (ಸಂಸ್ಕೃತ), ದಿವ್ಯಾ ಗಟ್ಟಿ ಪರಕ್ಕಿಲ (ಇಂಗ್ಲಿಷ್), ಸರ್ವಮಂಗಳ ರಾವ್ ಕೆ. (ಹಿಂದಿ), ಸಿಹಾನ ತೊಕ್ಕೋಟು (ಬ್ಯಾರಿ), ನಾರಾಯಣ ನಾಯ್ಕ ಕುದ್ಕುಳಿ (ಮರಾಠಿ), ಪ್ರಮೀಳಾ ಚುಳ್ಳಿಕ್ಕಾನ (ಹವ್ಯಕ), ಜ್ಯೋತ್ಸ್ನಾ ಎಂ. ಕಡಂದೇಲು (ಕರ್ಹಾಡ) ಹಾಗೂ ವಕೀಲ ಥೋಮಸ್ ಡಿಸೋಜ (ಕೊಂಕಣಿ) ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಜಯ ಮಣಿಯಂಪಾರೆ ಸ್ವಾಗತಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ. ಕವಿಗೋಷ್ಠಿಯನ್ನು ನಿರ್ವಹಿಸಿ ವಂದಿಸಿದರು. ಕವಿಗಳಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಎಚ್.ಸಿ.ಬೋರಲಿಂಗಯ್ಯ, ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಾಹಿದ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು. ರವಿ ನಾಯ್ಕಾಪು ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries