ಬದಿಯಡ್ಕ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಬದಿಯಡ್ಕ ಇದರ ಆಶ್ರಯದಲ್ಲಿ ಇಂಜಿನಿಯರ್ ಗಳ ದಿನಾಚರಣೆಯನ್ನು ಆಯೋಜಿಸಲಾಯಿತು. ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅವರು ಮಾತನಾಡಿ, ಪರಮಾತ್ಮ ಮಹಾನ್ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ದುಃಖ ಅಶಾಂತಿಯಿಂದ ಕೂಡಿರುವ ಭಾರತವನ್ನು ರಾಜಯೋಗ ಶಿಕ್ಷಣದ ಮೂಲಕ ಸ್ವರ್ಣಿಮಾ ಭಾರತವನ್ನಾಗಿ ಪರಿವರ್ತನೆ ಮಾಡುವ ಸಾಪ್ಟ್ ವೇರ್ ಆರ್ಕಿಟೆಕ್ಟ್. ಇಡೀ ಮಾನವ ಕುಲಕ್ಕೆ ಮಾರ್ಗಸೂಚಿಯನ್ನು ನೀಡುವ ಕೆಲಸ ಇವರಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಸಿವಿಲ್ ಇಂಜಿನಿಯರ್ ಮಹೇಂದ್ರ, ಸಿಪಿಸಿಆರ್.ಐ.ಯ ವಿಜ್ಞಾನಿ ಡಾ. ಸುಬ್ರಹ್ಮಣ್ಯ, ಮಂಗಳೂರು ನಗರ ಪಾಲಿಕೆ ಅಭಿಯಂತ ನಿತ್ಯಾನಂದ, ಅಭಿಯಂತ ಶಂಕರ ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ರಾಜಯೋಗಿನಿ ಬ್ರಹ್ಮಕುಮಾರಿ ಮಂಗಳ ಹಾಗೂ ಪ್ರೇಮ ಶಾಲು ಹೊದಿಸಿ ಈಶ್ವರೀಯ ಕಾಣಿಕೆ ನೀಡಿ ಗೌರವಿಸಿದರು. ಬ್ರಹ್ಮಕುಮಾರಿ ದೀಪ ಸ್ವಾಗತಿಸಿದರು. ಸಂಸ್ಥೆಯ ಪರಿಚಯವನ್ನು ಬ್ರಹ್ಮಕುಮಾರಿ ವಿನೋದ ನೀಡಿದರು. ರಾಜಯೋಗ ಮೆಡಿಟೇಶನ್ ಹಾಗೂ ಬ್ರಹ್ಮ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.jpg)
.jpg)
